Check out the new design

ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ * - ಅನುವಾದಗಳ ವಿಷಯಸೂಚಿ


ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್   ಶ್ಲೋಕ:
وَلَمَّا رَجَعَ مُوْسٰۤی اِلٰی قَوْمِهٖ غَضْبَانَ اَسِفًا ۙ— قَالَ بِئْسَمَا خَلَفْتُمُوْنِیْ مِنْ بَعْدِیْ ۚ— اَعَجِلْتُمْ اَمْرَ رَبِّكُمْ ۚ— وَاَلْقَی الْاَلْوَاحَ وَاَخَذَ بِرَاْسِ اَخِیْهِ یَجُرُّهٗۤ اِلَیْهِ ؕ— قَالَ ابْنَ اُمَّ اِنَّ الْقَوْمَ اسْتَضْعَفُوْنِیْ وَكَادُوْا یَقْتُلُوْنَنِیْ ۖؗ— فَلَا تُشْمِتْ بِیَ الْاَعْدَآءَ وَلَا تَجْعَلْنِیْ مَعَ الْقَوْمِ الظّٰلِمِیْنَ ۟
ಮತ್ತು ಮೂಸಾ ತಮ್ಮ ಜನರೆಡೆಗೆ ಕೋಪಿತರಾಗಿ ಹಾಗು ದುಃಖಿತರಾಗಿ ಮರಳಿದಾಗ ಹೇಳಿದರು: ನೀವು ನನ್ನ ನಂತರ ಅತಿ ನಿಕೃಷ್ಟ ಉತ್ತರಾಧಿಕಾರವನ್ನು ತೋರಿದಿರಿ. ನಿಮ್ಮ ಪ್ರಭುವಿನ ಆದೇಶಕ್ಕೆ ಮೊದಲೇ ನೀವು ಆತುರ ಪಟ್ಟಿರುವಿರಾ? ಮತ್ತು ಅವರು ಕೂಡಲೇ ಫಲಕಗಳನ್ನು ಕೆಳಗಡೆ ಹಾಕಿ ತಮ್ಮ ಸಹೊದರನ ತಲೆಗೂದಲನ್ನು ಹಿಡಿದು ತಮ್ಮೆಡೆಗೆ ಎಳೆಯ ತೊಡಗಿದರು. ಹಾರೂನ್ ಹೇಳಿದರು: ನನ್ನ ತಾಯಿ ಪುತ್ರನೇ, ಜನರು ನನ್ನನ್ನು ಬಲಹೀನನ್ನಾಗಿ ಮಾಡಿಬಿಟ್ಟರು ಮತ್ತು ನನ್ನನ್ನು ಕೊಂದುಬಿಡುವಷ್ಟಕ್ಕು ತಲುಪಿದರು. ಆದ್ದರಿಂದ ನೀನು ನನ್ನ ಮೇಲೆ ಶತ್ರುಗಳು ನಗುವಂತೆ ಮಾಡದಿರು ಮತ್ತು ಅಕ್ರಮಿಗಳ ಸಾಲಿನಲ್ಲಿ ನನ್ನನ್ನು ಸೇರಿಸದಿರು.
ಅರಬ್ಬಿ ವ್ಯಾಖ್ಯಾನಗಳು:
قَالَ رَبِّ اغْفِرْ لِیْ وَلِاَخِیْ وَاَدْخِلْنَا فِیْ رَحْمَتِكَ ۖؗ— وَاَنْتَ اَرْحَمُ الرّٰحِمِیْنَ ۟۠
ಮೂಸಾ ಹೇಳಿದರು: ನನ್ನ ಪ್ರಭೂ, ನನ್ನನ್ನು ಮತ್ತು ನನ್ನ ಸಹೋದರನನ್ನು ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸು ಮತ್ತು ನೀನು ಕರುಣೆ ತೋರುವವರಲ್ಲಿ ಅತ್ಯಂತ ಹೆಚ್ಚು ಕರುಣೆ ತೋರುವವನಾಗಿರುವೆ.
ಅರಬ್ಬಿ ವ್ಯಾಖ್ಯಾನಗಳು:
اِنَّ الَّذِیْنَ اتَّخَذُوا الْعِجْلَ سَیَنَالُهُمْ غَضَبٌ مِّنْ رَّبِّهِمْ وَذِلَّةٌ فِی الْحَیٰوةِ الدُّنْیَا ؕ— وَكَذٰلِكَ نَجْزِی الْمُفْتَرِیْنَ ۟
(ಅಲ್ಲಾಹನು ಹೇಳಿದನು) ನಿಸ್ಸಂಶಯವಾಗಿಯು ಕರುವನ್ನು ಆರಾಧ್ಯನನ್ನಾಗಿ ಮಾಡಿಕೊಂಡವರಿಗೆ ಶೀಘ್ರವೇ ತಮ್ಮ ಪ್ರಭುವಿನ ಕಡೆಯಿಂದ ಕ್ರೋಧ ತಟ್ಟಲಿದೆ ಹಾಗೂ ಐಹಿಕ ಜೀವನದಲ್ಲೇ ಅಪಮಾನವೆರಗಲಿದೆ. ಮತ್ತು ಸುಳ್ಳು ಹೆಣೆಯುವವರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
ಅರಬ್ಬಿ ವ್ಯಾಖ್ಯಾನಗಳು:
وَالَّذِیْنَ عَمِلُوا السَّیِّاٰتِ ثُمَّ تَابُوْا مِنْ بَعْدِهَا وَاٰمَنُوْۤا ؗ— اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟
ಯಾರು ದುಷ್ಕರ್ಮವೆಸಗಿದ, ನಂತರ ಪಶ್ಚಾತ್ತಾಪ ಪಟ್ಟರೋ ಮತ್ತು ಸತ್ಯವಿಶ್ವಾಸವಿಟ್ಟರೋ ಆಗ ನಿಮ್ಮ ಪ್ರಭು ಪಶ್ಚಾತ್ತಾಪದ ಬಳಿಕ ಪಾಪವನ್ನು ಕ್ಷಮಿಸುವವನು, ಕರುಣೆ ತೋರುವವನು ಆಗಿರುವನು.
ಅರಬ್ಬಿ ವ್ಯಾಖ್ಯಾನಗಳು:
وَلَمَّا سَكَتَ عَنْ مُّوْسَی الْغَضَبُ اَخَذَ الْاَلْوَاحَ ۖۚ— وَفِیْ نُسْخَتِهَا هُدًی وَّرَحْمَةٌ لِّلَّذِیْنَ هُمْ لِرَبِّهِمْ یَرْهَبُوْنَ ۟
ಮತ್ತು ಮೂಸಾರವರ ಕೋಪವು ತಣ್ಣಗಾದಾಗ ಆ ಫಲಕಗಳನ್ನು ಎತ್ತಿಕೊಂಡರು ಅವುಗಳಲ್ಲಿ ತಮ್ಮ ಪ್ರಭುವನ್ನು ಭಯಪಡುವ ಜನರಿಗೆ ಮಾರ್ಗದರ್ಶನವೂ, ಕಾರಣ್ಯವೂ ಇತ್ತು.
ಅರಬ್ಬಿ ವ್ಯಾಖ್ಯಾನಗಳು:
وَاخْتَارَ مُوْسٰی قَوْمَهٗ سَبْعِیْنَ رَجُلًا لِّمِیْقَاتِنَا ۚ— فَلَمَّاۤ اَخَذَتْهُمُ الرَّجْفَةُ قَالَ رَبِّ لَوْ شِئْتَ اَهْلَكْتَهُمْ مِّنْ قَبْلُ وَاِیَّایَ ؕ— اَتُهْلِكُنَا بِمَا فَعَلَ السُّفَهَآءُ مِنَّا ۚ— اِنْ هِیَ اِلَّا فِتْنَتُكَ ؕ— تُضِلُّ بِهَا مَنْ تَشَآءُ وَتَهْدِیْ مَنْ تَشَآءُ ؕ— اَنْتَ وَلِیُّنَا فَاغْفِرْ لَنَا وَارْحَمْنَا وَاَنْتَ خَیْرُ الْغٰفِرِیْنَ ۟
ಮತ್ತು ಮೂಸಾ ತಮ್ಮ ಜನರ ಪೈಕಿ ಎಪ್ಪತ್ತು ಮಂದಿಯನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ (ತೂರ್ ಪರ್ವತದೆಡೆಗೆ ಹೋಗಲು) ಆರಿಸಿಕೊಂಡರು. ನಂತರ (ಅಲ್ಲಿ ಅವರು ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣಲೇಬೇಕೆಂದ ಕಾರಣದಿಂದ) ಭೀಕರವಾದ ಕಂಪನವು ಅವರನ್ನು ಹಿಡಿದು ಬಿಟ್ಟಾಗ ಮೂಸಾ ಹೇಳಿದರು: ನನ್ನ ಪ್ರಭೂ, ನೀನು ಇಚ್ಛಿಸಿದ್ದರೆ ಇದಕ್ಕಿಂತ ಮುಂಚೆಯೇ ಅವರನ್ನು ಮತ್ತು ನನ್ನನ್ನು ನಾಶಗೊಳಿಸಿಬಿಡುತ್ತಿದ್ದೆ. ನಮ್ಮಲ್ಲಿನ ಕೆಲವು ಅವಿವೇಕಿಗಳು ಮಾಡಿದ ಕೃತ್ಯದ ನಿಮಿತ್ತ ನೀನು ನಮ್ಮನ್ನು ನಾಶಗೊಳಿಸುವೆಯಾ? ಇದು ನಿನ್ನ ಒಂದು ಪರೀಕ್ಷೆಯೇ ಆಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ಪಥಭ್ರಷ್ಟಗೊಳಿಸುವೆ ಮತ್ತು ನೀನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುವೆ. ನೀನೇ ನಮ್ಮ ಕಾರ್ಯಸಾಧಕನಾಗಿರುವೆ. ಹಾಗೆಯೇ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕಾರುಣ್ಯವನ್ನು ತೋರು. ಕ್ಷಮೆ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.
ಅರಬ್ಬಿ ವ್ಯಾಖ್ಯಾನಗಳು:
 
ಅರ್ಥಗಳ ಅನುವಾದ ಅಧ್ಯಾಯ: ಅಲ್- ಅಅ್ ರಾಫ್
ಅಧ್ಯಾಯಗಳ ವಿಷಯಸೂಚಿ ಪುಟ ಸಂಖ್ಯೆ
 
ಪವಿತ್ರ ಕುರ್‌ಆನ್ ಅರ್ಥಾನುವಾದ - ಕನ್ನಡ ಅನುವಾದ - ಬಶೀರ್ ಮೈಸೂರಿ - ಅನುವಾದಗಳ ವಿಷಯಸೂಚಿ

ಅನುವಾದ - ಶೇಖ್ ಬಶೀರ್ ಮೈಸೂರಿ. ರುವ್ವಾದ್ ಭಾಷಾಂತರ ಕೇಂದ್ರದ ಮೇಲ್ವಿಚಾರಣೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಮುಚ್ಚಿ