Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: نساء   آیت:

ಅನ್ನಿಸಾಅ್

یٰۤاَیُّهَا النَّاسُ اتَّقُوْا رَبَّكُمُ الَّذِیْ خَلَقَكُمْ مِّنْ نَّفْسٍ وَّاحِدَةٍ وَّخَلَقَ مِنْهَا زَوْجَهَا وَبَثَّ مِنْهُمَا رِجَالًا كَثِیْرًا وَّنِسَآءً ۚ— وَاتَّقُوا اللّٰهَ الَّذِیْ تَسَآءَلُوْنَ بِهٖ وَالْاَرْحَامَ ؕ— اِنَّ اللّٰهَ كَانَ عَلَیْكُمْ رَقِیْبًا ۟
ಓ ಜನರೇ, ನೀವು ನಿಮ್ಮ ಪರಿಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು ಮತ್ತು ಅದರಿಂದಲೇ ಅದರ ಜೋಡಿಯನ್ನು ಸೃಷ್ಟಿಸಿ ಅವರಿಬ್ಬರಿಂದ ಅನೇಕ ಪುರುಷರನ್ನೂ, ಸ್ತಿçÃಯರನ್ನೂ ಸೃಷ್ಟಿಸಿ (ಭೂಮಿಯಲ್ಲಿ) ಹರಡಿಸಿದನು. ನೀವು ಯಾರ ಹೆಸರಿನಲ್ಲಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ ಮತ್ತು ಕುಟುಂಬ ಸಂಬAಧಗಳನ್ನು ಮುರಿಯಬೇಡಿರಿ ನಿಸ್ಸಂಶಯವಾಗಿಯು ಅಲ್ಲಾಹನು ನಿಮ್ಮ ಮೇಲ್ವಿಚಾರಕನಾಗಿರುವನು.
عربي تفسیرونه:
وَاٰتُوا الْیَتٰمٰۤی اَمْوَالَهُمْ وَلَا تَتَبَدَّلُوا الْخَبِیْثَ بِالطَّیِّبِ ۪— وَلَا تَاْكُلُوْۤا اَمْوَالَهُمْ اِلٰۤی اَمْوَالِكُمْ ؕ— اِنَّهٗ كَانَ حُوْبًا كَبِیْرًا ۟
ಅನಾಥರಿಗೆ ಅವರ ಸೊತ್ತುಗಳನ್ನು ನೀವು ಕೊಟ್ಟುಬಿಡಿರಿ. ಅವರ ಒಳ್ಳೆಯ ವಸ್ತುಗಳ ಬದಲಾಗಿ ಕೆಟ್ಟವಸ್ತುಗಳನ್ನು ನೀಡಬೇಡಿರಿ ಮತ್ತು ನೀವು ನಿಮ್ಮ ಸೊತ್ತಿನೊಂದಿಗೆ ಅವರ ಸೊತ್ತುಗಳನ್ನು ಸೇರಿಸಿ ತಿನ್ನಬೇಡಿರಿ. ನಿಸ್ಸಂದೇಹವಾಗಿಯು ಇದು ಘೋರ ಅಪರಾಧವಾಗಿದೆ.
عربي تفسیرونه:
وَاِنْ خِفْتُمْ اَلَّا تُقْسِطُوْا فِی الْیَتٰمٰی فَانْكِحُوْا مَا طَابَ لَكُمْ مِّنَ النِّسَآءِ مَثْنٰی وَثُلٰثَ وَرُبٰعَ ۚ— فَاِنْ خِفْتُمْ اَلَّا تَعْدِلُوْا فَوَاحِدَةً اَوْ مَا مَلَكَتْ اَیْمَانُكُمْ ؕ— ذٰلِكَ اَدْنٰۤی اَلَّا تَعُوْلُوْا ۟ؕ
ಅನಾಥ ಹುಡುಗಿಯರನ್ನು ಮದುವೆಯಾಗಿ ನಿಮಗೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂದು ನೀವು ಭಯಪಡುವುದಾದರೆ ನಿಮಗಿಷ್ಟವಿರುವ ಇತರ ಸ್ತಿçÃಯರ ಪೈಕಿ ಇಬ್ಬರು ಅಥವಾ ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ. ಆದರೆ ನಿಮಗೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂಬ ಭಯವಿದ್ದರೆ ಒಬ್ಬಳನ್ನೇ ವಿವಾಹವಾಗಿರಿ ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮ ಸ್ತಿçÃಯನ್ನು ಸ್ವೀಕರಿಸಿರಿ. ಹೀಗೆ ನೀವು ಅನ್ಯಾಯ ಮಾಡದಿರಲು ಹೆಚ್ಚು ನಿಕಟವಾಗಿದೆ.
عربي تفسیرونه:
وَاٰتُوا النِّسَآءَ صَدُقٰتِهِنَّ نِحْلَةً ؕ— فَاِنْ طِبْنَ لَكُمْ عَنْ شَیْءٍ مِّنْهُ نَفْسًا فَكُلُوْهُ هَنِیْٓـًٔا مَّرِیْٓـًٔا ۟
ಮತ್ತು ಸ್ತಿçÃಯರಿಗೆ ಅವರ ವಧುಧನವನ್ನು ಆತ್ಮ ಸಂತೃಪ್ತಿಯಿAದ ನೀಡಿರಿ, ಅವರು ತಮ್ಮ ಸ್ವ-ಇಚ್ಛೆಯಿಂದ ಅದರಿಂದ ಅಲ್ಪವನ್ನು ನಿಮಗೆ ಬಿಟ್ಟು ಬಿಡುವುದಾದರೆ ಅದನ್ನು ಸಂತೋಷದಿAದ ಉಪಯೋಗಿಸಿರಿ.
عربي تفسیرونه:
وَلَا تُؤْتُوا السُّفَهَآءَ اَمْوَالَكُمُ الَّتِیْ جَعَلَ اللّٰهُ لَكُمْ قِیٰمًا وَّارْزُقُوْهُمْ فِیْهَا وَاكْسُوْهُمْ وَقُوْلُوْا لَهُمْ قَوْلًا مَّعْرُوْفًا ۟
ಅಲ್ಲಾಹನು ನಿಮ್ಮ ಜೀವನೋಪಾಯಕ್ಕಾಗಿ ನಿಶ್ಚಯಿಸಿರುವ ಸಂಪತ್ತನ್ನು ಅವಿವೇಕಿಗಳಿಗೆ ನೀಡಬೇಡಿರಿ. ಆದರೆ, ಅವರಿಗೆ ಅದರಿಂದ ಉಣ್ಣಲು, ಉಡಲು ಕೊಡಿರಿ ಹಾಗೂ ಅವರೊಂದಿಗೆ ಸದಾಚಾರದೊಂದಿಗೆ ಮೃದುವಾದ ಮಾತುಗಳನ್ನಾಡಿರಿ.
عربي تفسیرونه:
وَابْتَلُوا الْیَتٰمٰی حَتّٰۤی اِذَا بَلَغُوا النِّكَاحَ ۚ— فَاِنْ اٰنَسْتُمْ مِّنْهُمْ رُشْدًا فَادْفَعُوْۤا اِلَیْهِمْ اَمْوَالَهُمْ ۚ— وَلَا تَاْكُلُوْهَاۤ اِسْرَافًا وَّبِدَارًا اَنْ یَّكْبَرُوْا ؕ— وَمَنْ كَانَ غَنِیًّا فَلْیَسْتَعْفِفْ ۚ— وَمَنْ كَانَ فَقِیْرًا فَلْیَاْكُلْ بِالْمَعْرُوْفِ ؕ— فَاِذَا دَفَعْتُمْ اِلَیْهِمْ اَمْوَالَهُمْ فَاَشْهِدُوْا عَلَیْهِمْ ؕ— وَكَفٰی بِاللّٰهِ حَسِیْبًا ۟
ನೀವು ಅನಾಥರನ್ನು ಅವರು ಪ್ರಾಯಕ್ಕೆ ತಲುಪುವ ತನಕ ಸುಧಾರಿಸುತ್ತಾ, ಪರೀಕ್ಷಿಸಿರಿ. ನೀವು ಅವರಲ್ಲಿ ವ್ಯವಹಾರ ಪ್ರಜ್ಞೆಯನ್ನು ಕಂಡರೆ ಅವರ ಸಂಪತ್ತನ್ನು ಅವರಿಗೆ ಹಸ್ತಾಂತರಿಸಿರಿ. ಅವರು ಪ್ರೌಢರಾಗುತ್ತಿದ್ದಾರೆಂಬ ಭಯದಿಂದ ಅವರ ಸಂಪತ್ತನ್ನು ಲಗುಬಗನೆ ಅಮಿತವ್ಯಯದಿಂದ ಹಾಳು ಮಾಡದಿರಿ. ಶ್ರೀಮಂತರು (ಅವರ ಸಂಪತ್ತಿನಿAದ) ತಮ್ಮನ್ನು ದೂರವಿಡಲಿ. ಆದರೆ ನಿರ್ಗತಿಕನು ಅಗತ್ಯವಿದ್ದರೆ ಶಿಷ್ಟಾಚಾರದಂತೆ ನಿರ್ದಿಷ್ಟವಾಗಿ ತಿನ್ನಲಿ. ಅನಂತರ ಅವರ ಸೊತ್ತನ್ನು ಅವರಿಗೆ ನೀವು ಹಸ್ತಾಂತರಿಸುವಾಗ ಜನರನ್ನು ಸಾಕ್ಷಿಯಾಗಿರಿಸಿಕೊಳ್ಳಿರಿ ಲೆಕ್ಕಪರಿಶೋಧನೆಗೆ ಅಲ್ಲಾಹನೇ ಸಾಕು.
عربي تفسیرونه:
 
د معناګانو ژباړه سورت: نساء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول