Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: نساء   آیت:
وَلَوْ اَنَّا كَتَبْنَا عَلَیْهِمْ اَنِ اقْتُلُوْۤا اَنْفُسَكُمْ اَوِ اخْرُجُوْا مِنْ دِیَارِكُمْ مَّا فَعَلُوْهُ اِلَّا قَلِیْلٌ مِّنْهُمْ ؕ— وَلَوْ اَنَّهُمْ فَعَلُوْا مَا یُوْعَظُوْنَ بِهٖ لَكَانَ خَیْرًا لَّهُمْ وَاَشَدَّ تَثْبِیْتًا ۟ۙ
ನೀವು ನಿಮ್ಮ ಜೀವಗಳನ್ನೇ ಬಲಿಯರ್ಪಿಸಿರಿ ಅಥವಾ ನಿಮ್ಮ ಮನೆಗಳಿಂದ ಹೊರಟು ಹೋಗಿರಿ ಎಂದು ನಾವು ಅವರ ಮೇಲೆ ಕಡ್ಡಾಯಗೊಳಿಸಿರುತ್ತಿದ್ದರೆ ಅವರ ಪೈಕಿ ಅತ್ಯಲ್ಪ ಜನರ ಹೊರತು ಅದನ್ನು ಪಾಲಿಸುತ್ತಿರಲಿಲ್ಲ. ಮತ್ತು ಅವರು ತಮಗೆ ಉಪದೇಶಿಸಲಾಗುವುದನ್ನು ಮಾಡುತ್ತಿದ್ದರೆ ಖಂಡಿತ ಅದು ಅವರ ಪಾಲಿಗೆ ಉತ್ತಮವೂ, ಧರ್ಮದಲ್ಲಿ ಸದೃಢಗೊಳಿಸುವಂತದ್ದೂ ಆಗಿರುತ್ತಿತ್ತು.
عربي تفسیرونه:
وَّاِذًا لَّاٰتَیْنٰهُمْ مِّنْ لَّدُنَّاۤ اَجْرًا عَظِیْمًا ۟ۙ
ಹಾಗಿದ್ದರೆ ನಾವು ಅವರಿಗೆ ನಮ್ಮ ವತಿಯ ಮಹಾ ಪ್ರತಿಫಲವನ್ನು ದಯಪಾಲಿಸುತ್ತಿದ್ದೆವು.
عربي تفسیرونه:
وَّلَهَدَیْنٰهُمْ صِرَاطًا مُّسْتَقِیْمًا ۟
ಮತ್ತು ನಾವವರಿಗೆ ಖಂಡಿತ ನೇರ ಮಾರ್ಗವನ್ನು ತೋರಿಸುತ್ತಿದ್ದೆವು.
عربي تفسیرونه:
وَمَنْ یُّطِعِ اللّٰهَ وَالرَّسُوْلَ فَاُولٰٓىِٕكَ مَعَ الَّذِیْنَ اَنْعَمَ اللّٰهُ عَلَیْهِمْ مِّنَ النَّبِیّٖنَ وَالصِّدِّیْقِیْنَ وَالشُّهَدَآءِ وَالصّٰلِحِیْنَ ۚ— وَحَسُنَ اُولٰٓىِٕكَ رَفِیْقًا ۟ؕ
ಯಾರು ಅಲ್ಲಾಹನನ್ನೂ, ಸಂದೇಶವಾಹಕರನ್ನೂ ಅನುಸರಿಸುತ್ತಾರೋ ಅವರು ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾದ ಪೈಗಂಬರರು ಸತ್ಯಸಂಧರು, ಹುತಾತ್ಮರು, ಸಜ್ಜನರ ಜೊತೆ ಸ್ವರ್ಗದಲ್ಲಿರುವವರು. ಅವರು ಅತ್ಯುತ್ತಮ ಸಂಗಾತಿಗಳಾಗಿರುವರು.
عربي تفسیرونه:
ذٰلِكَ الْفَضْلُ مِنَ اللّٰهِ ؕ— وَكَفٰی بِاللّٰهِ عَلِیْمًا ۟۠
ಇದು ಅಲ್ಲಾಹನ ವತಿಯಿಂದ ಇರುವ ಅನುಗ್ರಹವಾಗಿದೆ ಎಲ್ಲವನ್ನೂ ಬಲ್ಲವನಾಗಿ ಅಲ್ಲಾಹನೇ ಸಾಕು.
عربي تفسیرونه:
یٰۤاَیُّهَا الَّذِیْنَ اٰمَنُوْا خُذُوْا حِذْرَكُمْ فَانْفِرُوْا ثُبَاتٍ اَوِ انْفِرُوْا جَمِیْعًا ۟
ಓ ಸತ್ಯವಿಶ್ವಾಸಿಗಳೇ, ನೀವು ನಿಮ್ಮ ರಕ್ಷಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳಿರಿ ಅನಂತರ ಸಣ್ಣ ಸಣ್ಣ ತುಕಡಿಗಳಾಗಿ ಅಥವಾ ಒಟ್ಟಾಗಿ ಯುದ್ಧಕ್ಕಾಗಿ ಸಜ್ಜಾಗಿರಿ.
عربي تفسیرونه:
وَاِنَّ مِنْكُمْ لَمَنْ لَّیُبَطِّئَنَّ ۚ— فَاِنْ اَصَابَتْكُمْ مُّصِیْبَةٌ قَالَ قَدْ اَنْعَمَ اللّٰهُ عَلَیَّ اِذْ لَمْ اَكُنْ مَّعَهُمْ شَهِیْدًا ۟
ಖಂಡಿತವಾಗಿಯು ನಿಮ್ಮ ಪೈಕಿ ಕೆಲವರು ಯುದ್ಧದಿಂದ ಹಿಂದುಳಿಯುವವರಿದ್ದಾರೆ. ಅನಂತರ ನಿಮಗೇನಾದರೂ ದುರಂತ ಬಾಧಿಸಿದರೆ 'ನಾನು ಅವರೊಂದಿಗೆ ಹಾಜರಾಗದಿರುವ ಮೂಲಕ ಅಲ್ಲಾಹನು ನನ್ನನ್ನು ಅನುಗ್ರಹಿಸಿದ್ದಾನೆಂದು ಅವನು ಹೇಳುತ್ತಾನೆ.
عربي تفسیرونه:
وَلَىِٕنْ اَصَابَكُمْ فَضْلٌ مِّنَ اللّٰهِ لَیَقُوْلَنَّ كَاَنْ لَّمْ تَكُنْ بَیْنَكُمْ وَبَیْنَهٗ مَوَدَّةٌ یّٰلَیْتَنِیْ كُنْتُ مَعَهُمْ فَاَفُوْزَ فَوْزًا عَظِیْمًا ۟
ನಿಮಗೆ ಅಲ್ಲಾಹನ ವತಿಯಿಂದ ಏನಾದರೂ ಅನುಗ್ರಹವು ಲಭಿಸಿದರೆ, ನಿಮ್ಮ ಮತ್ತು ಅವನ ನಡುವೆ ಪರಸ್ಪರ ಯಾವ ಗೆಳೆತನವೂ ಇರಲಿಲ್ಲವೆಂಬ ಮಟ್ಟಿನಲ್ಲಿ ಅಯ್ಯೋ ನಾನೂ ಸಹ ಅವರ ಜೊತೆಗಿರುತ್ತಿದ್ದರೆ ಎಷ್ಟು ಉತ್ತಮವಾಗಿರುತ್ತಿತ್ತು ಹಾಗೆಯೇ ನಾನೂ ವಿಜಯವನ್ನು ಗಳಿಸುತ್ತಿದ್ದೆ ಎಂದು ಹೇಳುವನು.
عربي تفسیرونه:
فَلْیُقَاتِلْ فِیْ سَبِیْلِ اللّٰهِ الَّذِیْنَ یَشْرُوْنَ الْحَیٰوةَ الدُّنْیَا بِالْاٰخِرَةِ ؕ— وَمَنْ یُّقَاتِلْ فِیْ سَبِیْلِ اللّٰهِ فَیُقْتَلْ اَوْ یَغْلِبْ فَسَوْفَ نُؤْتِیْهِ اَجْرًا عَظِیْمًا ۟
ಯಾರು ಪರಲೋಕ ಜೀವನದ ಬದಲಿಗೆ ಇಹಲೋಕ ಜೀವನವನ್ನು ಮಾರುವರೋ ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿ ಮತ್ತು ಯಾರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ ಹುತಾತ್ಮನಾಗುತ್ತಾನೋ ಅಥವಾ ಜಯಗಳಿಸುತ್ತಾನೋ ನಾವು ಅವನಿಗೆ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
عربي تفسیرونه:
 
د معناګانو ژباړه سورت: نساء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول