Check out the new design

د قرآن کریم د معناګانو ژباړه - کنادي ژباړه - بشیر ميسوري * - د ژباړو فهرست (لړلیک)


د معناګانو ژباړه سورت: نساء   آیت:
مَنْ یُّطِعِ الرَّسُوْلَ فَقَدْ اَطَاعَ اللّٰهَ ۚ— وَمَنْ تَوَلّٰی فَمَاۤ اَرْسَلْنٰكَ عَلَیْهِمْ حَفِیْظًا ۟ؕ
ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಖಂಡಿತವಾಗಿಯು ಅವನು ಅಲ್ಲಾಹನನ್ನು ಅನುಸರಿಸಿದನು ಮತ್ತು ಯಾರು ವಿಮುಖನಾಗುತ್ತಾನೊ ಅವರ ಮೇಲೆ ನಾವು ನಿಮ್ಮನ್ನು ಕಾವಲುಗಾರನಾಗಿ ನಿಯೋಗಿಸಿಲ್ಲ.
عربي تفسیرونه:
وَیَقُوْلُوْنَ طَاعَةٌ ؗ— فَاِذَا بَرَزُوْا مِنْ عِنْدِكَ بَیَّتَ طَآىِٕفَةٌ مِّنْهُمْ غَیْرَ الَّذِیْ تَقُوْلُ ؕ— وَاللّٰهُ یَكْتُبُ مَا یُبَیِّتُوْنَ ۚ— فَاَعْرِضْ عَنْهُمْ وَتَوَكَّلْ عَلَی اللّٰهِ ؕ— وَكَفٰی بِاللّٰهِ وَكِیْلًا ۟
ನಾವು ಅನುಸರಿಸುವೆವು ಎಂದು ಅವರು ಹೇಳುತ್ತಾರೆ ಅನಂತರ ಅವರು ನಿಮ್ಮ ಬಳಿಯಿಂದ ಎದ್ದು ಹೋದರೆ ಅವರಲ್ಲಿನ ಒಂದು ಗುಂಪು ನೀವು ಹೇಳಿರುವುದಕ್ಕೆ ವ್ಯತಿರಿಕ್ತವಾಗಿ ರಾತ್ರಿ ವೇಳೆ ಗೂಢಾಲೋಚನೆ ನಡೆಸುತ್ತಾರೆ. ಅವರ ರಾತ್ರಿ ವೇಳೆಯ ಗೂಢಾಲೋಚನೆಗಳನ್ನು ಅಲ್ಲಾಹನು ದಾಖಲಿಸುತ್ತಿರುವನು. ಆದ್ದರಿಂದ ನೀವು ಅರವನ್ನು ಕಡೆಗಣಿಸಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಕಾರ್ಯನಿರ್ವಾಹಕನಾಗಿ ಅಲ್ಲಾಹನೇ ಸಾಕು.
عربي تفسیرونه:
اَفَلَا یَتَدَبَّرُوْنَ الْقُرْاٰنَ ؕ— وَلَوْ كَانَ مِنْ عِنْدِ غَیْرِ اللّٰهِ لَوَجَدُوْا فِیْهِ اخْتِلَافًا كَثِیْرًا ۟
ಅವರು ಕುರ್‌ಆನಿನ ಕುರಿತು ಆಳವಾಗಿ ಚಿಂತಿಸುವುದಿಲ್ಲವೇ? ಅದು ಅಲ್ಲಾಹನ ಹೊರತು ಇನ್ನಾರದೇ ಕಡೆಯಿಂದಿರುತ್ತಿದ್ದರೆ ಖಂಡಿತ ಅವರು ಅದರಲ್ಲಿ ಬಹಳ ವೈರುಧ್ಯಗಳನ್ನು ಕಾಣುತ್ತಿದ್ದರು.
عربي تفسیرونه:
وَاِذَا جَآءَهُمْ اَمْرٌ مِّنَ الْاَمْنِ اَوِ الْخَوْفِ اَذَاعُوْا بِهٖ ؕ— وَلَوْ رَدُّوْهُ اِلَی الرَّسُوْلِ وَاِلٰۤی اُولِی الْاَمْرِ مِنْهُمْ لَعَلِمَهُ الَّذِیْنَ یَسْتَنْۢبِطُوْنَهٗ مِنْهُمْ ؕ— وَلَوْلَا فَضْلُ اللّٰهِ عَلَیْكُمْ وَرَحْمَتُهٗ لَاتَّبَعْتُمُ الشَّیْطٰنَ اِلَّا قَلِیْلًا ۟
ಅವರಿಗೆ ಯಾವುದಾದರೂ ಶಾಂತಿ ಅಥವಾ ಭೀತಿಯ ಸುದ್ಧಿ ಲಭಿಸಿದರೆ ಅವರದನ್ನು ಪ್ರಚಾರ ಮಾಡುತ್ತಾರೆ. ಅವರೇನಾದರೂ ಅದನ್ನು ಸಂದೇಶವಾಹಕ(ಸ)ರಿಗೂ ಮತ್ತು ಅಧಿಕಾರಸ್ಥರಿಗೆ ಒಪ್ಪಿಸುತ್ತಿದ್ದರೆ ಅವರ ಪೈಕಿ ವಿಚಾರಗಳನ್ನು ಆಳವಾಗಿ ಚಿಂತಿಸುವವರು ಅದರ ವಾಸ್ತವಿಕತೆಯನ್ನು ಅರಿತುಕೊಳ್ಳುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಕರುಣೆ ಇಲ್ಲದಿರುತ್ತಿದ್ದರೆ ಕೆಲವರ ಹೊರತು ನೀವೆಲ್ಲರೂ ಶೈತಾನನನ್ನು ಅನುಸರಿಸುತ್ತಿದ್ದೀರಿ.
عربي تفسیرونه:
فَقَاتِلْ فِیْ سَبِیْلِ اللّٰهِ ۚ— لَا تُكَلَّفُ اِلَّا نَفْسَكَ وَحَرِّضِ الْمُؤْمِنِیْنَ ۚ— عَسَی اللّٰهُ اَنْ یَّكُفَّ بَاْسَ الَّذِیْنَ كَفَرُوْا ؕ— وَاللّٰهُ اَشَدُّ بَاْسًا وَّاَشَدُّ تَنْكِیْلًا ۟
ಆದ್ದರಿಂದ (ಓ ಪೈಗಂಬರರೇ) ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನಿಮ್ಮ ಮೇಲೆ ನಿಮ್ಮದಲ್ಲದೆ ಇತರರ ಹೊಣೆಯಿಲ್ಲ. ನೀವು ಸತ್ಯವಿಶ್ವಾಸಿಗಳನ್ನು (ಯುದ್ಧಕ್ಕಾಗಿ) ಹುರಿದುಂಬಿಸಿರಿ ಅಲ್ಲಾಹನು ಸತ್ಯನಿಷೇಧಿಗಳ ಅತಿಕ್ರಮಣವನ್ನು ತಡೆಯುವ ಹೆಚ್ಚಿನ ಸಾಧ್ಯತೆಯಿದೆ. ಅಲ್ಲಾಹನು ಅತ್ಯಂತ ಆಕ್ರಮಣ ಶೀಲನೂ, ಕಠಿಣವಾಗಿ ಶಿಕ್ಷಿಸುವವನು ಆಗಿದ್ದಾನೆ.
عربي تفسیرونه:
مَنْ یَّشْفَعْ شَفَاعَةً حَسَنَةً یَّكُنْ لَّهٗ نَصِیْبٌ مِّنْهَا ۚ— وَمَنْ یَّشْفَعْ شَفَاعَةً سَیِّئَةً یَّكُنْ لَّهٗ كِفْلٌ مِّنْهَا ؕ— وَكَانَ اللّٰهُ عَلٰی كُلِّ شَیْءٍ مُّقِیْتًا ۟
ಯಾರು ಯಾವುದಾದರೂ ಒಳಿತಿನ ಶಿಫಾರಸ್ಸು ಮಾಡುತ್ತಾನೋ ಅವನಿಗೂ ಅದರಲ್ಲಿ ಒಂದು ಪಾಲು ಲಭಿಸುವುದು ಮತ್ತು ಯಾರು ಕೆಡುಕಿನ ಶಿಫಾರಸ್ಸು ಮಾಡುತ್ತಾನೋ ಅದರಲ್ಲಿ ಅವನಿಗೊಂದು ಪಾಲಿದೆ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
عربي تفسیرونه:
وَاِذَا حُیِّیْتُمْ بِتَحِیَّةٍ فَحَیُّوْا بِاَحْسَنَ مِنْهَاۤ اَوْ رُدُّوْهَا ؕ— اِنَّ اللّٰهَ كَانَ عَلٰی كُلِّ شَیْءٍ حَسِیْبًا ۟
ನಿಮಗೆ ಸಲಾಮ್ ಹೇಳಲಾದರೆ ನೀವು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ಅಥವಾ ಅದೇ ರೀತಿಯಲ್ಲಿ ಪ್ರತಿ ಸಲಾಮ್ ಹೇಳಿರಿ. ಖಂಡಿತವಾಗಿಯು ಅಲ್ಲಾಹನು ಪ್ರತಿಯೊಂದು ಸಂಗತಿಯ ಲೆಕ್ಕ ವಿಚಾರಣೆ ನಡೆಸುವವನಾಗಿದ್ದಾನೆ.
عربي تفسیرونه:
 
د معناګانو ژباړه سورت: نساء
د سورتونو فهرست (لړلیک) د مخ نمبر
 
د قرآن کریم د معناګانو ژباړه - کنادي ژباړه - بشیر ميسوري - د ژباړو فهرست (لړلیک)

د شیخ بشیر ميسوري لخوا ژباړل شوې ده. د رواد الترجمة مرکز تر څارنې لاندې انکشاف ورکړل شوی.

بندول