للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الحج   آية:
ذٰلِكَ بِاَنَّ اللّٰهَ هُوَ الْحَقُّ وَاَنَّهٗ یُحْیِ الْمَوْتٰی وَاَنَّهٗ عَلٰی كُلِّ شَیْءٍ قَدِیْرٌ ۟ۙ
ಇದೇಕೆಂದರೆ ನಿಶ್ಚಯವಾಗಿಯೂ ಅಲ್ಲಾಹನೇ ಪರಮ ಸತ್ಯ ಮತ್ತು ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನು ಪ್ರತಿಯೊಂದು ವಸ್ತುವಿನ ಮೇಲೆ ಸರ್ವ ಸಮರ್ಥನಾಗಿದ್ದಾನೆ.
التفاسير العربية:
وَّاَنَّ السَّاعَةَ اٰتِیَةٌ لَّا رَیْبَ فِیْهَا ۙ— وَاَنَّ اللّٰهَ یَبْعَثُ مَنْ فِی الْقُبُوْرِ ۟
ಪ್ರಳಯ ಸಮಯವು ಖಂಡಿತ ಬರಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಸಮಾಧಿಯಲ್ಲಿರುವವರನ್ನು ಪುನಃ ಎಬ್ಬಿಸುವನು.
التفاسير العربية:
وَمِنَ النَّاسِ مَنْ یُّجَادِلُ فِی اللّٰهِ بِغَیْرِ عِلْمٍ وَّلَا هُدًی وَّلَا كِتٰبٍ مُّنِیْرٍ ۟ۙ
ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
التفاسير العربية:
ثَانِیَ عِطْفِهٖ لِیُضِلَّ عَنْ سَبِیْلِ اللّٰهِ ؕ— لَهٗ فِی الدُّنْیَا خِزْیٌ وَّنُذِیْقُهٗ یَوْمَ الْقِیٰمَةِ عَذَابَ الْحَرِیْقِ ۟
ಜನರ ಪೈಕಿ ಕೆಲವರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ, ಮತ್ತು ಪ್ರಕಾಶಮಯ ಗ್ರಂಥವಿಲ್ಲದೇ ತರ್ಕ ಮಾಡುವವರೂ ಇದ್ದಾರೆ.
التفاسير العربية:
ذٰلِكَ بِمَا قَدَّمَتْ یَدٰكَ وَاَنَّ اللّٰهَ لَیْسَ بِظَلَّامٍ لِّلْعَبِیْدِ ۟۠
ಇದು ನಿನ್ನ ಕೈಗಳು ಮೊದಲೇ ಮಾಡಿರುವ ಕರ್ಮಗಳ ಫಲವಾಗಿದೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸುಗುವವನಲ್ಲ.
التفاسير العربية:
وَمِنَ النَّاسِ مَنْ یَّعْبُدُ اللّٰهَ عَلٰی حَرْفٍ ۚ— فَاِنْ اَصَابَهٗ خَیْرُ ١طْمَاَنَّ بِهٖ ۚ— وَاِنْ اَصَابَتْهُ فِتْنَةُ ١نْقَلَبَ عَلٰی وَجْهِهٖ ۫ۚ— خَسِرَ الدُّنْیَا وَالْاٰخِرَةَ ؕ— ذٰلِكَ هُوَ الْخُسْرَانُ الْمُبِیْنُ ۟
ಜನರಲ್ಲಿ ಕೆಲವರು ಅಂಚಿನಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುವವರಾಗಿದ್ದಾರೆ. ಅವರಿಗೆ ಒಳಿತೇನಾದರೂ ಸಿಕ್ಕಿದರೆ ಆಸಕ್ತಿ ತೋರಿಸುತ್ತಾರೆ ಇನ್ನು ಯಾವುದಾದರೂ ವಿಪತ್ತು ಬಾಧಿಸಿದರೆ ಕೂಡಲೇ ವಿಮುಖರಾಗಿಬಿಡುತ್ತಾರೆ. ಅವರು ಇಹಪರ ಲೋಕಗಳನ್ನು ನಷ್ಟ ಮಾಡಿಕೊಂಡವರಾಗಿದ್ದಾರೆ. ನಿಜವಾಗಿಯು ಇದುವೇ ಸ್ಪಷ್ಟ ನಷ್ಟ.
التفاسير العربية:
یَدْعُوْا مِنْ دُوْنِ اللّٰهِ مَا لَا یَضُرُّهٗ وَمَا لَا یَنْفَعُهٗ ؕ— ذٰلِكَ هُوَ الضَّلٰلُ الْبَعِیْدُ ۟ۚ
ಅವನು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲೀ, ಲಾಭವನ್ನಾಗಲೀ ಮಾಡದ ವಸ್ತುಗಳನ್ನು ಕರೆದು ಬೇಡುತ್ತಾನೆ. ಇದುವೇ ಅತಿವಿದೂರದ ಮಾರ್ಗಭ್ರಷ್ಟತೆಯಾಗಿದೆ.
التفاسير العربية:
یَدْعُوْا لَمَنْ ضَرُّهٗۤ اَقْرَبُ مِنْ نَّفْعِهٖ ؕ— لَبِئْسَ الْمَوْلٰی وَلَبِئْسَ الْعَشِیْرُ ۟
ಯಾರ ಹಾನಿಯು ಅವರ ಲಾಭಕ್ಕಿಂತ ಹತ್ತಿರವಿದೆಯೋ ಅಂತಹವನನ್ನು ಅವನು ಕರೆದು ಬೇಡುತ್ತಾನೆ. ವಾಸ್ತವದಲ್ಲಿ ಅವನು ಅದೆಷ್ಟು ಕೆಟ್ಟ ರಕ್ಷಕನು! ಮತ್ತು ಅದೆಷ್ಟು ಕೆಟ್ಟ ಸಂಗಾತಿ!
التفاسير العربية:
اِنَّ اللّٰهَ یُدْخِلُ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ ؕ— اِنَّ اللّٰهَ یَفْعَلُ مَا یُرِیْدُ ۟
ಸತ್ಯವಿಶ್ವಾಸಿವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರನ್ನು ನಿಶ್ಚಯವಾಗಿಯು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವನು. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದ್ದನ್ನು ಮಾಡುತ್ತಾನೆ.
التفاسير العربية:
مَنْ كَانَ یَظُنُّ اَنْ لَّنْ یَّنْصُرَهُ اللّٰهُ فِی الدُّنْیَا وَالْاٰخِرَةِ فَلْیَمْدُدْ بِسَبَبٍ اِلَی السَّمَآءِ ثُمَّ لْیَقْطَعْ فَلْیَنْظُرْ هَلْ یُذْهِبَنَّ كَیْدُهٗ مَا یَغِیْظُ ۟
ಅಲ್ಲಾಹನು ತನ್ನ ಸಂದೇಶವಾಹಕರಿಗೆ ಇಹಪರ ಲೋಕದಲ್ಲಿ ಸಹಾಯ ಮಾಡಲಾರನೆಂದು ಯಾರು ಭಾವಿಸುತ್ತಿದ್ದನೋ ಅವನು ಒಂದು ಹಗ್ಗವನ್ನು ಎತ್ತರಕ್ಕೆ ಕಟ್ಟಿಕೊಂಡು (ತನ್ನ ಕೊರಳಿಗೆ ಉರುಳಾಗಿಸಿ ತನ್ನ ಕತ್ತನ್ನು ಹಿಸುಕಿಕೊಳ್ಳಲಿ) ಆ ಬಳಿಕ ಅವನು ತನ್ನ ಯೋಜನೆಗಳು ತನಗೆ ಅಸಹನೆ ಹುಟ್ಟಿಸುತ್ತಿದ್ದಂತಹ ವಿಚಾರವನ್ನು ನೀಗಿಸುವುದೇ ನೋಡಲಿ.
التفاسير العربية:
 
ترجمة معاني سورة: الحج
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق