للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الحج   آية:
اَلْمُلْكُ یَوْمَىِٕذٍ لِّلّٰهِ ؕ— یَحْكُمُ بَیْنَهُمْ ؕ— فَالَّذِیْنَ اٰمَنُوْا وَعَمِلُوا الصّٰلِحٰتِ فِیْ جَنّٰتِ النَّعِیْمِ ۟
ಆ ದಿನ ಕೇವಲ ಅಲ್ಲಾಹನ ಅಧಿಪತ್ಯವಿರುವುದು. ಅವನೇ ಅವರ ನಡುವೆ ತೀರ್ಪು ನೀಡುವನು.ಸತ್ಯವಿಶ್ವಾಸವಿರಿಸಿದವರು, ಸತ್ಕರ್ಮಗಳನ್ನು ಕೈಗೊಂಡವರು ಅನುಗ್ರಹಪೂರ್ಣ ಸ್ವಗೋದ್ಯಾನಗಳಲ್ಲಿರುವರು.
التفاسير العربية:
وَالَّذِیْنَ كَفَرُوْا وَكَذَّبُوْا بِاٰیٰتِنَا فَاُولٰٓىِٕكَ لَهُمْ عَذَابٌ مُّهِیْنٌ ۟۠
ಇನ್ನು ಯಾರು ಸತ್ಯನಿಷೇಧಿಸಿ ನಮ್ಮ ಸೂಕ್ತಿಗಳನ್ನು ಸುಳ್ಳಾಗಿಸಿದರೋ ಅವರಿಗೆ ಅಪಮಾನಕರ ಶಿಕ್ಷೆಯಿರುವುದು.
التفاسير العربية:
وَالَّذِیْنَ هَاجَرُوْا فِیْ سَبِیْلِ اللّٰهِ ثُمَّ قُتِلُوْۤا اَوْ مَاتُوْا لَیَرْزُقَنَّهُمُ اللّٰهُ رِزْقًا حَسَنًا ؕ— وَاِنَّ اللّٰهَ لَهُوَ خَیْرُ الرّٰزِقِیْنَ ۟
ಯಾರು ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗಿ ಅನಂತರ ಕೊಲ್ಲಲ್ಪಟ್ಟರೋ ಅಥವ ಸಹಜ ಮರಣ ಹೊಂದಿದರೋ ಅವರಿಗೆ ಅಲ್ಲಾಹನು ಅತ್ಯುತ್ತಮವಾಗಿರುವ ಜೀವನಾಧಾರವನ್ನು ದಯಪಾಲಿಸುತ್ತಾನೆ. ಮತ್ತು ನಿಸ್ಸಂಶಯವಾಗಿಯೂ ಅವನು ಜೀವನಾಧಾರ ನೀಡುವವರಲ್ಲಿ ಅತ್ಯುತ್ತಮನಾಗಿರುವನು.
التفاسير العربية:
لَیُدْخِلَنَّهُمْ مُّدْخَلًا یَّرْضَوْنَهٗ ؕ— وَاِنَّ اللّٰهَ لَعَلِیْمٌ حَلِیْمٌ ۟
ಅವರು ಸಂತುಷ್ಟರಾಗುವAತಹ ಸ್ಥಳಕ್ಕೆ ಅವರನ್ನು ತಲುಪಿಸುವನು. ನಿಸ್ಸಂದೇಹವಾಗಿಯೂ ಅಲ್ಲಾಹನು ಮಹಾಜ್ಞಾನಿಯೂ ಹಾಗೂ ಸಹನಾಶೀಲನಾಗಿರುವನು.
التفاسير العربية:
ذٰلِكَ ۚ— وَمَنْ عَاقَبَ بِمِثْلِ مَا عُوْقِبَ بِهٖ ثُمَّ بُغِیَ عَلَیْهِ لَیَنْصُرَنَّهُ اللّٰهُ ؕ— اِنَّ اللّٰهَ لَعَفُوٌّ غَفُوْرٌ ۟
ಇದು ಅವರ ಅಂತಿಮ ಪರಿಣಾಮವಾಯಿತು. ಒಬ್ಬನು ಹಿಂಸೆಗೊಳಗಾದಷ್ಟೇ ಪ್ರತಿಕಾರ ಪಡೆದರೆ ಆ ಬಳಿಕ ಅವನ ಮೇಲೆ ಪುನಃ ಅತಿಕ್ರಮ ನಡೆದರೆ ಖಂಡಿತವಾಗಿಯು ಅಲ್ಲಾಹನು ಅವನಿಗೆ ಸಹಾಯ ನೀಡುತ್ತಾನೆ. ನಿಸ್ಸಂಶಯವಾಗಿಯೂ ಅಲ್ಲಾಹನು ಪಾಪಗಳನ್ನು ಮನ್ನಿಸುವವನು, ಕ್ಷಮಾಶೀಲನು ಆಗಿರುವನು.
التفاسير العربية:
ذٰلِكَ بِاَنَّ اللّٰهَ یُوْلِجُ الَّیْلَ فِی النَّهَارِ وَیُوْلِجُ النَّهَارَ فِی الَّیْلِ وَاَنَّ اللّٰهَ سَمِیْعٌ بَصِیْرٌ ۟
ಇದೇಕೆಂದರೆ ಅಲ್ಲಾಹನು ರಾತ್ರಿಯನ್ನು ಹಗಲಿನೊಳಗೆ ಹಾಗೂ ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಮತ್ತು ವಾಸ್ತವದಲ್ಲಿ ಅಲ್ಲಾಹನು ಸರ್ವವನ್ನಾಲಿಸುವವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
التفاسير العربية:
ذٰلِكَ بِاَنَّ اللّٰهَ هُوَ الْحَقُّ وَاَنَّ مَا یَدْعُوْنَ مِنْ دُوْنِهٖ هُوَ الْبَاطِلُ وَاَنَّ اللّٰهَ هُوَ الْعَلِیُّ الْكَبِیْرُ ۟
ಇದೇಕೆಂದರೆ ವಾಸ್ತವದಲ್ಲಿ ಅಲ್ಲಾಹನೇ ಸತ್ಯ ಮತ್ತು ಅವನ ಹೊರತು ಅವರು ಕರೆದು ಬೇಡುತ್ತಿರುವ ವಸ್ತುಗಳು ಮಿಥ್ಯವಾಗಿರುವುದು. ನಿಶ್ಚಯವಾಗಿಯೂ ಅಲ್ಲಾಹನು ಉನ್ನತನು, ಮಹಾನನು ಆಗಿದ್ದಾನೆ.
التفاسير العربية:
اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً ؗ— فَتُصْبِحُ الْاَرْضُ مُخْضَرَّةً ؕ— اِنَّ اللّٰهَ لَطِیْفٌ خَبِیْرٌ ۟ۚ
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ, ಅನಂತರ ಭೂಮಿಯು ಹಚ್ಚಹಸಿರಾಗಿರುವುದನ್ನು ನೀವು ನೋಡಲಿಲ್ಲವೇ? ನಿಸ್ಸಂಶಯವಾಗಿಯೂ ಅಲ್ಲಾಹನು ಸೂಕ್ಷö್ಮಗ್ರಹಿಯು, ವಿವರ ಪೂರ್ಣನೂ ಆಗಿದ್ದಾನೆ.
التفاسير العربية:
لَهٗ مَا فِی السَّمٰوٰتِ وَمَا فِی الْاَرْضِ ؕ— وَاِنَّ اللّٰهَ لَهُوَ الْغَنِیُّ الْحَمِیْدُ ۟۠
ಭೂಮಿ, ಆಕಾಶಗಳಲ್ಲಿರುವುದೆಲ್ಲವೂ ಅವನದ್ದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನೇ ನಿರಪೇಕ್ಷಕನು ಸ್ತುತ್ಯರ್ಹನು ಆಗಿದ್ದಾನೆ.
التفاسير العربية:
 
ترجمة معاني سورة: الحج
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق