للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الأحزاب   آية:
یَسْـَٔلُكَ النَّاسُ عَنِ السَّاعَةِ ؕ— قُلْ اِنَّمَا عِلْمُهَا عِنْدَ اللّٰهِ ؕ— وَمَا یُدْرِیْكَ لَعَلَّ السَّاعَةَ تَكُوْنُ قَرِیْبًا ۟
ಅಂತ್ಯ ಗಳಿಗೆಯ (ಪ್ರಳಯ) ಬಗ್ಗೆ ನಿಮ್ಮೊಂದಿಗೆ ಜನರು ವಿಚಾರಿಸುತ್ತಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ. ನಿಮಗೇನು ಗೊತ್ತು? ಅಂತ್ಯಗಳಿಗೆಯು ಅತ್ಯಂತ ಸಮೀಪವಿರಬಹುದು.
التفاسير العربية:
اِنَّ اللّٰهَ لَعَنَ الْكٰفِرِیْنَ وَاَعَدَّ لَهُمْ سَعِیْرًا ۟ۙ
ಖಂಡಿತವಾಗಿಯೂ ಅಲ್ಲಾಹನು ಸತ್ಯನಿಷೇಧಿಗಳನ್ನು ಶಪಿಸಿದ್ದಾನೆ ಹಾಗೂ ಅವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದಾನೆ.
التفاسير العربية:
خٰلِدِیْنَ فِیْهَاۤ اَبَدًا ۚ— لَا یَجِدُوْنَ وَلِیًّا وَّلَا نَصِیْرًا ۟ۚ
ಅದರಲ್ಲಿ ಅವರು ಶಾಶ್ವತವಾಗಿರುವರು. ಅವರು ಯಾವ ರಕ್ಷಕ ಮಿತ್ರನನ್ನಾಗಲೀ, ಸಹಾಯಕನನ್ನಾಗಲೀ ಪಡೆಯಲಾರರು.
التفاسير العربية:
یَوْمَ تُقَلَّبُ وُجُوْهُهُمْ فِی النَّارِ یَقُوْلُوْنَ یٰلَیْتَنَاۤ اَطَعْنَا اللّٰهَ وَاَطَعْنَا الرَّسُوْلَا ۟
ಅವರ ಮುಖಗಳನ್ನು ನರಕಾಗ್ನಿಯಲ್ಲಿ ಹೊರಳಿಸಲಾಗುವ ದಿನ ಅಯ್ಯೋ! ನಾವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಿದ್ದರೆ! ಎಂದು ಹೇಳುವರು.
التفاسير العربية:
وَقَالُوْا رَبَّنَاۤ اِنَّاۤ اَطَعْنَا سَادَتَنَا وَكُبَرَآءَنَا فَاَضَلُّوْنَا السَّبِیْلَا ۟
ಮತ್ತು ಹೇಳುವರು: ನಮ್ಮ ಪ್ರಭುವೇ, ನಾವು ನಮ್ಮ ನಾಯಕರನ್ನೂ, ನಮ್ಮ ಹಿರಿಯರನ್ನೂ ಅನುಸರಿಸಿದೆವು. ಹಾಗೆ ಅವರು ನಮ್ಮನ್ನು ದಾರಿಗೆಡಿಸಿದರು.
التفاسير العربية:
رَبَّنَاۤ اٰتِهِمْ ضِعْفَیْنِ مِنَ الْعَذَابِ وَالْعَنْهُمْ لَعْنًا كَبِیْرًا ۟۠
ನಮ್ಮ ಪ್ರಭುವೇ, ಅವರಿಗೆ ಇಮ್ಮಡಿ ಯಾತನೆಯನ್ನು ನೀಡು ಮತ್ತು ಅವರ ಮೇಲೆ ಮಹಾ ಶಾಪವನ್ನು ಎರಗಿಸು.
التفاسير العربية:
یٰۤاَیُّهَا الَّذِیْنَ اٰمَنُوْا لَا تَكُوْنُوْا كَالَّذِیْنَ اٰذَوْا مُوْسٰی فَبَرَّاَهُ اللّٰهُ مِمَّا قَالُوْا ؕ— وَكَانَ عِنْدَ اللّٰهِ وَجِیْهًا ۟
ಓ ಸತ್ಯವಿಶ್ವಾಸಿಗಳೇ, ನೀವು ಮೂಸಾರವರಿಗೆ ಕಿರುಕುಳ ಕೊಟ್ಟವರಂತೆ ಆಗಬೇಡಿರಿ. ಆ ಬಳಿಕ ಅಲ್ಲಾಹನು ಅವರು ಹೇಳಿರುವಂತಹ ಆಪಾದನೆಗಳಿಂದ ಅವರನ್ನು ವಿಮುಕ್ತಗೊಳಿಸಿದನು ಮತ್ತು ಅಲ್ಲಾಹನ ಬಳಿ ಅವರು ಗೌರವಾನ್ವಿತರಾಗಿದ್ದರು.
التفاسير العربية:
یٰۤاَیُّهَا الَّذِیْنَ اٰمَنُوا اتَّقُوا اللّٰهَ وَقُوْلُوْا قَوْلًا سَدِیْدًا ۟ۙ
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತುಗಳನ್ನು ಆಡಿರಿ.
التفاسير العربية:
یُّصْلِحْ لَكُمْ اَعْمَالَكُمْ وَیَغْفِرْ لَكُمْ ذُنُوْبَكُمْ ؕ— وَمَنْ یُّطِعِ اللّٰهَ وَرَسُوْلَهٗ فَقَدْ فَازَ فَوْزًا عَظِیْمًا ۟
ಹಾಗಾದರೆ ಅವನು ನಿಮ್ಮ ಕರ್ಮಗಳನ್ನು ಸುಧಾರಿಸುವ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನು. ಯಾರು ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ ನಿಸ್ಸಂಶಯವಾಗಿಯೂ ಅವನು ಮಹಾ ಯಶಸ್ಸನ್ನು ಪಡೆದನು.
التفاسير العربية:
اِنَّا عَرَضْنَا الْاَمَانَةَ عَلَی السَّمٰوٰتِ وَالْاَرْضِ وَالْجِبَالِ فَاَبَیْنَ اَنْ یَّحْمِلْنَهَا وَاَشْفَقْنَ مِنْهَا وَحَمَلَهَا الْاِنْسَانُ ؕ— اِنَّهٗ كَانَ ظَلُوْمًا جَهُوْلًا ۟ۙ
ನಿಸ್ಸಂದೇಹವಾಗಿಯೂ ನಾವು ಅಮಾನತ್ತನ್ನು (ಹೊಣೆಯನ್ನು) ಆಕಾಶಗಳ, ಮತ್ತು ಭೂಮಿಯ ಹಾಗೂ ಪರ್ವತಗಳ ಮುಂದೆ ಪ್ರಸ್ತುತಪಡಿಸಿದೆವು. ಆದರೆ ಅದನ್ನು ವಹಿಸಿಕೊಳ್ಳಲು ಅವು ನಿರಾಕರಿಸಿದವು ಮತ್ತು ಅದರ ನಿಮಿತ್ತ ಭಯ ಪಟ್ಟವು (ಆದರೆ) ಅದನ್ನು ಮನುಷ್ಯನು ವಹಿಸಿಕೊಂಡನು. ನಿಶ್ಚಯವಾಗಿಯೂ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಮಹಾ ಅಕ್ರಮಿಯೂ ಅವಿವೇಕಿಯೂ ಆಗಿದ್ದಾನೆ.
التفاسير العربية:
لِّیُعَذِّبَ اللّٰهُ الْمُنٰفِقِیْنَ وَالْمُنٰفِقٰتِ وَالْمُشْرِكِیْنَ وَالْمُشْرِكٰتِ وَیَتُوْبَ اللّٰهُ عَلَی الْمُؤْمِنِیْنَ وَالْمُؤْمِنٰتِ ؕ— وَكَانَ اللّٰهُ غَفُوْرًا رَّحِیْمًا ۟۠
ಇದೇಕೆಂದರೆ ಅಲ್ಲಾಹನು ಕಪಟವಿಶ್ವಾಸಿಗಳನ್ನು ಮತ್ತು ಕಪಟ ವಿಶ್ವಾಸಿನಿಯರನ್ನು. ಬಹುದೇವಾರಾಧಕರನ್ನು ಮತ್ತು ಬಹುದೇವ ಆರಾಧಕಿಯರನ್ನು ಶಿಕ್ಷಿಸಲೆಂದಾಗಿರುತ್ತದೆ ಮತ್ತು ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಯರಿಂದ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೆಂದಾಗಿರುತ್ತದೆ ಮತ್ತು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
التفاسير العربية:
 
ترجمة معاني سورة: الأحزاب
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق