للإطلاع على الموقع بحلته الجديدة

ترجمة معاني القرآن الكريم - الترجمة الكنادية - بشير ميسوري * - فهرس التراجم


ترجمة معاني سورة: الأحزاب   آية:
وَمَنْ یَّقْنُتْ مِنْكُنَّ لِلّٰهِ وَرَسُوْلِهٖ وَتَعْمَلْ صَالِحًا نُّؤْتِهَاۤ اَجْرَهَا مَرَّتَیْنِ ۙ— وَاَعْتَدْنَا لَهَا رِزْقًا كَرِیْمًا ۟
ನಿಮ್ಮ ಪೈಕಿ ಯಾರು ಅಲ್ಲಾಹನಿಗೆ ಹಾಗೂ ಅವನ ಸಂದೇಶವಾಹಕರಿಗೆ ವಿಧೇಯತೆ ತೋರುತ್ತಾಳೋ ಮತ್ತು ಸತ್ಕರ್ಮಗಳನ್ನು ಕೈಗೊಳ್ಳುತ್ತಾಳೋ ನಾವು ಅವಳಿಗೆ ಇಮ್ಮಡಿ ಪ್ರತಿಫಲವನ್ನು ನೀಡುವೆವು ಮತ್ತು ಆಕೆಗೆ ನಾವು ಗೌರವಪೂರ್ಣ ಜೀವನಾಧಾರವನ್ನು ಸಿದ್ಧಗೊಳಿಸಿಟ್ಟಿರುತ್ತೇವೆ.
التفاسير العربية:
یٰنِسَآءَ النَّبِیِّ لَسْتُنَّ كَاَحَدٍ مِّنَ النِّسَآءِ اِنِ اتَّقَیْتُنَّ فَلَا تَخْضَعْنَ بِالْقَوْلِ فَیَطْمَعَ الَّذِیْ فِیْ قَلْبِهٖ مَرَضٌ وَّقُلْنَ قَوْلًا مَّعْرُوْفًا ۟ۚ
ಓ ಪೈಗಂಬರರ ಪತ್ನಿಯರೇ ನೀವು ಸಾಮಾನ್ಯ ಸ್ತಿçÃಯರಂತಲ್ಲಾ. ನೀವು ಭಯಭಕ್ತಿಯನ್ನಿರಿಸಿಕೊಂಡಿದ್ದರೆ (ಪುರುಷರೊಂದಿಗೆ) ಮೃದು ಸ್ವರದೊಂದಿಗೆ ಮಾತನ್ನಾಡಬೇಡಿರಿ. ಹೃದಯದಲ್ಲಿ ರೋಗವಿದ್ದವನಿಗೆ ಮೋಹ ಉಂಟಾಗಬಹುದು ಮತ್ತು ನೀವು ಶಿಷ್ಟಾಚಾರಕ್ಕನುಗುಣ ವಾಗಿ ಮಾತನ್ನಾಡಿರಿ.
التفاسير العربية:
وَقَرْنَ فِیْ بُیُوْتِكُنَّ وَلَا تَبَرَّجْنَ تَبَرُّجَ الْجَاهِلِیَّةِ الْاُوْلٰی وَاَقِمْنَ الصَّلٰوةَ وَاٰتِیْنَ الزَّكٰوةَ وَاَطِعْنَ اللّٰهَ وَرَسُوْلَهٗ ؕ— اِنَّمَا یُرِیْدُ اللّٰهُ لِیُذْهِبَ عَنْكُمُ الرِّجْسَ اَهْلَ الْبَیْتِ وَیُطَهِّرَكُمْ تَطْهِیْرًا ۟ۚ
ನೀವು ನಿಮ್ಮ ಮನೆಗಳಲ್ಲಿ ಸ್ಥಿರವಾಗಿರಿ ಹಾಗೂ ಗತ ಅಜ್ಞಾನ ಕಾಲದಂತೆ ನಿಮ್ಮ ಶೃಂಗಾರವನ್ನು ಪ್ರದರ್ಶನ ಮಾಡಬೇಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಝಕಾತ್ ನೀಡಿ ಹಾಗೂ ಅಲ್ಲಾಹನ, ಮತ್ತು ಅವನ ಸಂದೇಶವಾಹಕರ ಅನುಸರಣೆ ಮಾಡಿರಿ. ಓ ಪೈಗಂಬರರ ಮನೆಯವರೇ, ಅಲ್ಲಾಹನು ನಿಮ್ಮಿಂದ ಮಾಲಿನ್ಯವನ್ನು ನೀಗಿಸಲು ಹಾಗೂ ನಿಮ್ಮನ್ನು ಚೆನ್ನಾಗಿ ಶುದ್ಧೀಕರಿಸಲು ಮಾತ್ರ ಇಚ್ಛಿಸುತ್ತಾನೆ.
التفاسير العربية:
وَاذْكُرْنَ مَا یُتْلٰی فِیْ بُیُوْتِكُنَّ مِنْ اٰیٰتِ اللّٰهِ وَالْحِكْمَةِ ؕ— اِنَّ اللّٰهَ كَانَ لَطِیْفًا خَبِیْرًا ۟۠
ಮತ್ತು ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಿಗಳನ್ನು ಹಾಗೂ ಯುಕ್ತಿಪೂರ್ಣ ಸುಜ್ಞಾನವನ್ನೂ ನೆನಪಿಡಿರಿ. ನಿಶ್ಚಯವಾಗಿಯೂ ಅಲ್ಲಾಹನು ಸೂಕ್ಷö್ಮಜ್ಞನೂ ವಿವರಪೂರ್ಣನೂ ಆಗಿದ್ದಾನೆ.
التفاسير العربية:
اِنَّ الْمُسْلِمِیْنَ وَالْمُسْلِمٰتِ وَالْمُؤْمِنِیْنَ وَالْمُؤْمِنٰتِ وَالْقٰنِتِیْنَ وَالْقٰنِتٰتِ وَالصّٰدِقِیْنَ وَالصّٰدِقٰتِ وَالصّٰبِرِیْنَ وَالصّٰبِرٰتِ وَالْخٰشِعِیْنَ وَالْخٰشِعٰتِ وَالْمُتَصَدِّقِیْنَ وَالْمُتَصَدِّقٰتِ وَالصَّآىِٕمِیْنَ وَالصّٰٓىِٕمٰتِ وَالْحٰفِظِیْنَ فُرُوْجَهُمْ وَالْحٰفِظٰتِ وَالذّٰكِرِیْنَ اللّٰهَ كَثِیْرًا وَّالذّٰكِرٰتِ ۙ— اَعَدَّ اللّٰهُ لَهُمْ مَّغْفِرَةً وَّاَجْرًا عَظِیْمًا ۟
ನಿಸ್ಸಂಶಯವಾಗಿಯೂ ಶರಣಾಗಿರುವ ಪುರುಷರು ಮತ್ತು ಶರಣರಾಗಿರುವ ಸ್ತಿçÃಯರು, ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರು, ವಿಧೇಯರಾಗಿರುವ ಪುರುಷರು, ವಿಧೇಯವಂತೆ ಸ್ತಿçÃಯರು ಮತ್ತು ಸತ್ಯಸಂಧ ಪುರುಷರು ಮತ್ತು ಸತ್ಯಸಂಧತೆಯುಳ್ಳ ಸ್ತಿçÃಯರು, ಸಹನಾಶೀಲ ಪುರುಷರು ಮತ್ತು ಸಹನಾಶೀಲೆ ಸ್ತಿçÃಯರು, ದೈನ್ಯತೆ ತೋರುವ ಪುರಷರು ಮತ್ತು ದೈನ್ಯತೆ ತೋರುವ ಸ್ತಿçÃಯರು, ದಾನಶೀಲ ಪುರಷರು ಮತ್ತು ದಾನಶೀಲೆ ಸ್ತಿçÃಯರು, ಉಪವಾಸ ಆಚರಣೆ ಮಾಡುವ ಪುರುಷರು ಮತ್ತು ಉಪವಾಸ ಆಚರಣೆ ಮಾಡುವ ಸ್ತಿçÃಯರು, ತಮ್ಮ ಗುಪ್ತಾಂಗಗಳನ್ನು ಸಂರಕ್ಷಿಸಿಕೊಳ್ಳುವ ಪುರುಷರು ಮತ್ತು ಸಂರಕ್ಷಿಸಿಕೊಳ್ಳುವ ಸ್ತಿçÃಯರು, ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವ ಪುರಷರು ಮತ್ತು ಸ್ಮರಿಸುವ ಸ್ತಿçÃಯರು ಅವರೆಲ್ಲರಿಗೆ ಅಲ್ಲಾಹನು ಕ್ಷಮೆಯನ್ನು ಮತ್ತು ಮಹಾ ಪ್ರತಿಫಲವನ್ನು ಸಿದ್ಧಪಡಿಸಿಟ್ಟಿರುತ್ತಾನೆ.
التفاسير العربية:
 
ترجمة معاني سورة: الأحزاب
فهرس السور رقم الصفحة
 
ترجمة معاني القرآن الكريم - الترجمة الكنادية - بشير ميسوري - فهرس التراجم

ترجمها الشيخ بشير ميسوري. تم تطويرها بإشراف مركز رواد الترجمة.

إغلاق