ಇದು ನಿಮ್ಮೆಡೆಗೆ ಅವತೀರ್ಣ ಗೊಳಿಸಲಾದ ದಿವ್ಯ ಗ್ರಂಥವಾಗಿದೆ. ಇದರ ಮೂಲಕ ನೀವು ಎಚ್ಚರಿಕೆ ನೀಡಲೆಂದಾಗಿದೆ. ಆದ್ದರಿಂದ ನಿಮ್ಮ ಹೃದಯದಲ್ಲಿ ಇದರ ನಿಮಿತ್ತ ಯಾವುದೇ ಇಕ್ಕಟ್ಟುಂಟಾಗದಿರಲಿ. ಇದು ಸತ್ಯವಿಶ್ವಾಸಿಗಳಿಗೆ ಉಪದೇಶವಾಗಿದೆ.
ಮತ್ತು ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ ಮತ್ತು ರಾತ್ರಿ ವೇಳೆಯಲ್ಲಿ ಅಥವಾ ಅವರು ಮಧ್ಯಾಹ್ನದ ವೇಳೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರ ಮೇಲೆ ನಮ್ಮ ಶಿಕ್ಷೆಯು ಬಂದೆರಗಿಬಿಟ್ಟಿತು.
ಮತ್ತು ಯಾವ ವ್ಯಕ್ತಿಯ ತಕ್ಕಡಿಯು ಹಗುರವಾಗಿರುವುದೋ ಅವರೆ ಸ್ವತಃ ತಮ್ಮನ್ನು ನಷ್ಟಕ್ಕೀಡು ಮಾಡಿದವರಾಗಿದ್ದಾರೆ. ಇದು ನಮ್ಮ ದೃಷ್ಟಾಂತಗಳೊAದಿಗೆ ಅವರು ಅತಿಕ್ರಮವನ್ನು ತೋರಿಸುತ್ತಿದ್ದುದರ ನಿಮಿತ್ತವಾಗಿದೆ.
ಖಂಡಿತವಾಗಿಯು ನಾವು ನಿಮ್ಮನ್ನು ಸೃಷ್ಟಿಸಿದೆವು ಮತ್ತು ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ಆದಮರಿಗೆ ಸಾಷ್ಟಾಂಗವೆರಗಿರಿ. ಎಂದು ದೇವಚರರೊಂದಿಗೆ ಹೇಳಿದೆವು. ಆಗ ಅವರು ಸಾಷ್ಟಾಂಗವೆರಗಿದರು,; ಇಬ್ಲೀಸನ ಹೊರತು. ಅವನು ಸಾಷ್ಟಾಂಗವೆರಗುವವರಲ್ಲಿ ಸೇರಲಿಲ್ಲ.