Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
قَالُوا ادْعُ لَنَا رَبَّكَ یُبَیِّنْ لَّنَا مَا هِیَ ۙ— اِنَّ الْبَقَرَ تَشٰبَهَ عَلَیْنَا ؕ— وَاِنَّاۤ اِنْ شَآءَ اللّٰهُ لَمُهْتَدُوْنَ ۟
ಅದು ಯಾವ ತರಹದ್ದಾಗಿರಬೇಕೆಂದು ಅದರ ಹೆಚ್ಚಿನ ವಿವರ ತಿಳಿಸಲು ನೀವು ನಮಗಾಗಿ ನಿಮ್ಮ ಪ್ರಭುವಿನೊಡನೆ ಪ್ರಾರ್ಥಿಸಿರಿ ಎಂದರು. ಒಂದಕ್ಕೊಂದು ಹೋಲುವ ಹಸುಗಳಿಂದ ನಮಗೆ ಗೊಂದಲವಾಗುತ್ತಿದೆ. ಅಲ್ಲಾಹನೇನಾದರು ಇಚ್ಛಿಸಿದರೆ ನಾವು ಸರಿಯಾದ ದಾರಿ ಪಡೆಯುವೆವು.
അറബി ഖുർആൻ വിവരണങ്ങൾ:
قَالَ اِنَّهٗ یَقُوْلُ اِنَّهَا بَقَرَةٌ لَّا ذَلُوْلٌ تُثِیْرُ الْاَرْضَ وَلَا تَسْقِی الْحَرْثَ ۚ— مُسَلَّمَةٌ لَّا شِیَةَ فِیْهَا ؕ— قَالُوا الْـٰٔنَ جِئْتَ بِالْحَقِّ ؕ— فَذَبَحُوْهَا وَمَا كَادُوْا یَفْعَلُوْنَ ۟۠
ಮೂಸ(ಅ) ಹೇಳಿದರು; ಆ ಹಸುವು ಭೂಮಿಯನ್ನು ಊಳುವುದಕ್ಕಾಗಲೀ, ಕೃಷಿಗೆ ನೀರು ಎತ್ತಲಿಕ್ಕಾಗಲೀ ಬಳಸದ ಅಂಗ ವೈಕಲ್ಯ ಇಲ್ಲದ್ದಾಗಿರಬೇಕು ಎಂದು ಅವನು ಹೇಳುತ್ತಾನೆ. ಆಗ ಅವರು ಹೇಳಿದರು; ನೀವು ಇದೀಗ ಸಂಪೂರ್ಣ ಮಾಹಿತಿಯನ್ನು ನೀಡಿರುವಿರಿ, ಅವರು ಅದನ್ನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವರು ಅದನ್ನು ಒಪ್ಪಿಕೊಂಡರು ಮತ್ತು ಆ ಹಸುವನ್ನು ಕೊಯ್ದು ಬಿಟ್ಟರು.
അറബി ഖുർആൻ വിവരണങ്ങൾ:
وَاِذْ قَتَلْتُمْ نَفْسًا فَادّٰرَءْتُمْ فِیْهَا ؕ— وَاللّٰهُ مُخْرِجٌ مَّا كُنْتُمْ تَكْتُمُوْنَ ۟ۚ
ನೀವು ಒಬ್ಬ ವ್ಯಕ್ತಿಯನ್ನು ಕೊಂದು ಅನಂತರ ಅದರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತೋರಿದ ಸಂದರ್ಭ ಮತ್ತು ಅಲ್ಲಾಹನು ನೀವು ರಹಸ್ಯವಾಗಿಡುವುದನ್ನು ಹೊರತರುವವನಾಗಿದ್ದನು.
അറബി ഖുർആൻ വിവരണങ്ങൾ:
فَقُلْنَا اضْرِبُوْهُ بِبَعْضِهَا ؕ— كَذٰلِكَ یُحْیِ اللّٰهُ الْمَوْتٰی وَیُرِیْكُمْ اٰیٰتِهٖ لَعَلَّكُمْ تَعْقِلُوْنَ ۟
ಆಗ ನಾವು ಹೇಳಿದೆವು ! ಆ ಹಸುವಿನ ಒಂದು ತುಂಡನ್ನು ಕೊಲೆಗೀಡಾದವನ ಶರೀರಕ್ಕೆ ತಾಗಿಸಿರಿ. (ಅವನು ಜೀವಂತವಾಗಿ ಏಳುವನು) ಇದೇ ಪ್ರಕಾರ ಅಲ್ಲಾಹನು ಮೃತರನ್ನು ಜೀವಂತಗೊಳಿಸುತ್ತಾನೆ. ನೀವು ಯೋಚಿಸಲ್ಲಿಕ್ಕಾಗಿ ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿ ಕೊಡುತ್ತಾನೆ.
അറബി ഖുർആൻ വിവരണങ്ങൾ:
ثُمَّ قَسَتْ قُلُوْبُكُمْ مِّنْ بَعْدِ ذٰلِكَ فَهِیَ كَالْحِجَارَةِ اَوْ اَشَدُّ قَسْوَةً ؕ— وَاِنَّ مِنَ الْحِجَارَةِ لَمَا یَتَفَجَّرُ مِنْهُ الْاَنْهٰرُ ؕ— وَاِنَّ مِنْهَا لَمَا یَشَّقَّقُ فَیَخْرُجُ مِنْهُ الْمَآءُ ؕ— وَاِنَّ مِنْهَا لَمَا یَهْبِطُ مِنْ خَشْیَةِ اللّٰهِ ؕ— وَمَا اللّٰهُ بِغَافِلٍ عَمَّا تَعْمَلُوْنَ ۟
ಅದಾದ ಬಳಿಕ ನಿಮ್ಮ ಹೃದಯಗಳು ಕಲ್ಲಿನಂತೆ ಅಥವಾ ಅದಕ್ಕಿಂತಲೂ ಕಠೋರವಾದವು. ಕೆÀಲವು ಕಲ್ಲುಗಳಿಂದ ಚಿಲಮೆಗಳು ಹೊರಚಿಮ್ಮುತ್ತವೆ ಮತ್ತು ಕೆಲವು ಒಡೆಯುತ್ತವೆ ಹಾಗೂ ಅವುಗಳಿಂದ ಜಲವು ಹೊರ ಬರುತ್ತದೆ. ಮತ್ತು ಕೆಲವು ಅಲ್ಲಾಹನ ಭಯದ ನಿಮಿತ್ತ ಕೆಳಗುರುಳುತ್ತವೆ ಮತ್ತು ಅಲ್ಲಾಹನು ನಿಮ್ಮ ಕೃತ್ಯಗಳ ಕುರಿತು ಅಲಕ್ಷö್ಯನಲ್ಲ.
അറബി ഖുർആൻ വിവരണങ്ങൾ:
اَفَتَطْمَعُوْنَ اَنْ یُّؤْمِنُوْا لَكُمْ وَقَدْ كَانَ فَرِیْقٌ مِّنْهُمْ یَسْمَعُوْنَ كَلٰمَ اللّٰهِ ثُمَّ یُحَرِّفُوْنَهٗ مِنْ بَعْدِ مَا عَقَلُوْهُ وَهُمْ یَعْلَمُوْنَ ۟
ಓ ಸತ್ಯವಿಶ್ವಾಸಿಗಳೇ ಈ ಜನರು (ಯಹೂದರು) ವಿಶ್ವಾಸಿಗಳಾಗಲೆಂದು ನೀವು ಆಶಿಸುತ್ತಿದ್ದೀರಾ? ವಸ್ತುತಃ ಅವರ ಪೈಕಿ ಒಂದು ವರ್ಗವು ಅಲ್ಲಾಹನ ವಚನಗಳನ್ನು ಕೇಳಿ ಅದನ್ನು ಅರ್ಥ ಮಾಡಿಕೊಂಡ ಬಳಿಕವೂ ಅದರಲ್ಲಿ ಬದಲಾವಣೆ ಮಾಡುತ್ತಿದ್ದರು.
അറബി ഖുർആൻ വിവരണങ്ങൾ:
وَاِذَا لَقُوا الَّذِیْنَ اٰمَنُوْا قَالُوْۤا اٰمَنَّا ۖۚ— وَاِذَا خَلَا بَعْضُهُمْ اِلٰی بَعْضٍ قَالُوْۤا اَتُحَدِّثُوْنَهُمْ بِمَا فَتَحَ اللّٰهُ عَلَیْكُمْ لِیُحَآجُّوْكُمْ بِهٖ عِنْدَ رَبِّكُمْ ؕ— اَفَلَا تَعْقِلُوْنَ ۟
ಅವರು (ಯಹೂದಿ) ಸತ್ಯವಿಶ್ವಾಸಿಗಳನ್ನು ಭೇಟಿಯಾದಾಗ ನಾವು ವಿಶ್ವಾಸಿಗಳೆಂದು ಹೇಳುತ್ತಾರೆ. ಮತ್ತು ಅವರು ಪರಸ್ಪರರನ್ನು ಏಕಾಂತದಲ್ಲಿ ಭೇಟಿಯಾದಾಗ ಹೇಳುತ್ತಾರೆ; ನಿಮ್ಮ ಪ್ರಭುವಿನ ಬಳಿ ನಿಮ್ಮ ವಿರುದ್ಧ ಮುಸ್ಲಿಮರಿಗೆ ಆಧಾರವಾಗಲೆಂದು ನಿಮಗೆ ಅಲ್ಲಾಹನು ವ್ಯಕ್ತಗೊಳಿಸಿದ ವಿಚಾರವನ್ನು ನೀವು ಅವರಿಗೆ ತಿಳಿಸಿಕೊಡುತ್ತ್ತಿರುವಿರಾ? ನೀವು ಯೋಚಿಸುವುದಿಲ್ಲವೇ?
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക