Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
وَاقْتُلُوْهُمْ حَیْثُ ثَقِفْتُمُوْهُمْ وَاَخْرِجُوْهُمْ مِّنْ حَیْثُ اَخْرَجُوْكُمْ وَالْفِتْنَةُ اَشَدُّ مِنَ الْقَتْلِ ۚ— وَلَا تُقٰتِلُوْهُمْ عِنْدَ الْمَسْجِدِ الْحَرَامِ حَتّٰی یُقٰتِلُوْكُمْ فِیْهِ ۚ— فَاِنْ قٰتَلُوْكُمْ فَاقْتُلُوْهُمْ ؕ— كَذٰلِكَ جَزَآءُ الْكٰفِرِیْنَ ۟
ಮತ್ತು ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಹೊರಗಟ್ಟಿದ್ದಲ್ಲಿಂದಲೇ ನೀವು ಅವರನ್ನು ಹೊರಗಟ್ಟಿರಿ ಮತ್ತು ಕ್ಷೆÆÃಭೆಯು ಕೊಲೆಗಿಂತಲೂ ಹೆಚ್ಚು ಉಗ್ರವಾಗಿದೆ. ಮತ್ತು ನೀವು ಮಸ್ಜಿದುಲ್ ಹರಾಮ್ ಪರಿಸರದಲ್ಲಿ ಸ್ವತಃ ಅವರು ನಿಮ್ಮೊಂದಿಗೆ ಯುದ್ಧ ಆರಂಭಿಸುವ ತನಕ ನೀವು ಅವರೊಂದಿಗೆ ಯುದ್ಧ ಮಾಡಬೇಡಿರಿ. ಇನ್ನು ಅವರು ನಿಮ್ಮೊಂದಿಗೆ ಯುದ್ದ ಮಾಡಿದರೆ ನೀವು ಅವರನ್ನು ವಧಿಸಿರಿ. ಸತ್ಯನಿಷೇಧಿಗಳ ಪ್ರತಿಫಲವು ಇದೇ ಆಗಿದೆ.
അറബി ഖുർആൻ വിവരണങ്ങൾ:
فَاِنِ انْتَهَوْا فَاِنَّ اللّٰهَ غَفُوْرٌ رَّحِیْمٌ ۟
ಇನ್ನು ಅವರು (ಪಶ್ಚಾತ್ತಾಪ ಪಟ್ಟು) ಯುದ್ಧ ವಿರಾಮಗೊಳಿಸಿದರೆ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ.
അറബി ഖുർആൻ വിവരണങ്ങൾ:
وَقٰتِلُوْهُمْ حَتّٰی لَا تَكُوْنَ فِتْنَةٌ وَّیَكُوْنَ الدِّیْنُ لِلّٰهِ ؕ— فَاِنِ انْتَهَوْا فَلَا عُدْوَانَ اِلَّا عَلَی الظّٰلِمِیْنَ ۟
ಕ್ಷೆÆÃಭೆಯು ಕೊನೆಗೊಂಡು ಅಲ್ಲಾಹನ ಧರ್ಮಕ್ಕೆ ವಿಜಯ ಪ್ರಾಪ್ತಿಯಾಗುವ ತನಕ ಅವರೊಂದಿಗೆ ಯುದ್ಧ ಮಾಡಿರಿ. ಇನ್ನು ಅವರು ಯುದ್ಧ ವಿರಾಮಗೊಳಿಸಿದರೆ ನಂತರ ಅಕ್ರಮಿಗಳ ಹೊರತು ಇನ್ನಾರೊಂದಿಗೂ ಅಕ್ರಮಣ ಸಲ್ಲದು.
അറബി ഖുർആൻ വിവരണങ്ങൾ:
اَلشَّهْرُ الْحَرَامُ بِالشَّهْرِ الْحَرَامِ وَالْحُرُمٰتُ قِصَاصٌ ؕ— فَمَنِ اعْتَدٰی عَلَیْكُمْ فَاعْتَدُوْا عَلَیْهِ بِمِثْلِ مَا اعْتَدٰی عَلَیْكُمْ ۪— وَاتَّقُوا اللّٰهَ وَاعْلَمُوْۤا اَنَّ اللّٰهَ مَعَ الْمُتَّقِیْنَ ۟
ಆದರಣಿಯ ತಿಂಗಳುಗಳ ಪ್ರತಿಯಾಗಿ ಆದರಣಿಯ ತಿಂಗಳುಗಳಿವೆ. ನಿಷಿದ್ಧ ಸಂಗತಿಗಳಿಗೂ ತತ್ಸಮಾನ ಕ್ರಮವಿರುವುದು. ಯಾರು ನಿಮ್ಮ ವಿರುದ್ಧ ಅತಿಕ್ರಮ ತೋರುತ್ತಾನೋ ಅವನು ನಿಮ್ಮ ವಿರುದ್ದ ಅತಿಕ್ರಮ ತೋರಿದಷ್ಟೆ ನೀವು ಸಹ ಅವನ ವಿರುದ್ಧ ಅತಿಕ್ರಮ ತೋರಿರಿ ಹಾಗೂ ಅಲ್ಲಾಹನನ್ನು ಭಯಪಡಿರಿ ನಿಶ್ಚಯವಾಗಿಯು ಅಲ್ಲಾಹನು ಭಯ ಭಕ್ತಿಯುಳ್ಳವರೊಂದಿಗೆ ಇದ್ದಾನೆಂಬುವುದನ್ನು ತಿಳಿದುಕೊಳ್ಳಿರಿ.
അറബി ഖുർആൻ വിവരണങ്ങൾ:
وَاَنْفِقُوْا فِیْ سَبِیْلِ اللّٰهِ وَلَا تُلْقُوْا بِاَیْدِیْكُمْ اِلَی التَّهْلُكَةِ ۛۚ— وَاَحْسِنُوْا ۛۚ— اِنَّ اللّٰهَ یُحِبُّ الْمُحْسِنِیْنَ ۟
ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಮತ್ತು ಸ್ವತಃ ನಿಮ್ಮ ಕೈಗಳ ಮೂಲಕ ನಾಶಕೂಪದಲ್ಲಿ ಬೀಳಬೇಡಿರಿ ಮತ್ತು ನೀವು ಒಳಿತನ್ನು ಪಾಲಿಸಿರಿ. ಅಲ್ಲಾಹನು ಒಳಿತಿನ ಪಾಲಕರನ್ನು ಇಷ್ಟಪಡುತ್ತಾನೆ.
അറബി ഖുർആൻ വിവരണങ്ങൾ:
وَاَتِمُّوا الْحَجَّ وَالْعُمْرَةَ لِلّٰهِ ؕ— فَاِنْ اُحْصِرْتُمْ فَمَا اسْتَیْسَرَ مِنَ الْهَدْیِ ۚ— وَلَا تَحْلِقُوْا رُءُوْسَكُمْ حَتّٰی یَبْلُغَ الْهَدْیُ مَحِلَّهٗ ؕ— فَمَنْ كَانَ مِنْكُمْ مَّرِیْضًا اَوْ بِهٖۤ اَذًی مِّنْ رَّاْسِهٖ فَفِدْیَةٌ مِّنْ صِیَامٍ اَوْ صَدَقَةٍ اَوْ نُسُكٍ ۚ— فَاِذَاۤ اَمِنْتُمْ ۥ— فَمَنْ تَمَتَّعَ بِالْعُمْرَةِ اِلَی الْحَجِّ فَمَا اسْتَیْسَرَ مِنَ الْهَدْیِ ۚ— فَمَنْ لَّمْ یَجِدْ فَصِیَامُ ثَلٰثَةِ اَیَّامٍ فِی الْحَجِّ وَسَبْعَةٍ اِذَا رَجَعْتُمْ ؕ— تِلْكَ عَشَرَةٌ كَامِلَةٌ ؕ— ذٰلِكَ لِمَنْ لَّمْ یَكُنْ اَهْلُهٗ حَاضِرِی الْمَسْجِدِ الْحَرَامِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ شَدِیْدُ الْعِقَابِ ۟۠
ನೀವು ಅಲ್ಲಾಹನಿಗಾಗಿ ಹಜ್ಜ್ ಹಾಗೂ ಉಮ್ರಾವನ್ನು ನೆರವೇರಿಸಿರಿ. ಇನ್ನು ನೀವು ತಡೆಯಲ್ಪಟ್ಟರೆ ಬಲಿಮೃಗಗಳಲ್ಲಿ ಸಾಧ್ಯವಾಗುವುದನ್ನು ಬಲಿ ಅರ್ಪಿಸಿರಿ. ನೀವು ನಿಮ್ಮ ತಲೆಗಳನ್ನು ಬಲಿಮೃಗವು ಅದರ ಬಲಿದಾಣವನ್ನು ತಲುಪುವವರೆಗೆ ಕೇಶ ಮುಂಡನೆ ಮಾಡಬೇಡಿರಿ. ಆದರೆ ನಿಮ್ಮ ಪೈಕಿ ಯಾರಾದರೂ ರೋಗಿಯಾಗಿದ್ದರೆ ಅಥವಾ ಅವನ ತಲೆಯಲ್ಲಿ ಏನಾದರೂ ತೊಂದರೆಯಿದ್ದರೆ (ಅವನು ಕೇಶಮುಂಡನ ಮಾಡಿಕೊಂಡರೆ) ಉಪವಾಸಗಳಿಂದ ಇಲ್ಲವೇ ದಾನಧರ್ಮಗಳಿಂದ ಇಲ್ಲವೇ ಬಲಿದಾನಗಳಿಂದ ಪ್ರಾಯಶ್ಚಿತ್ತ ನೀಡಬೇಕಾಗಿದೆ. ಇನ್ನು ನೀವು ನಿರ್ಭಯ ಸ್ಥಿತಿಯಲ್ಲಿದ್ದರೆ ಯಾರಾದರೂ ಹಜ್ಜ್-ಎ-ತಮತ್ತೂ ಮಾಡುತ್ತಾನೋ ಅವನು ಸಾಧ್ಯವಾಗುವ ಬಲಿ ಮೃಗವನ್ನು ಬಲಿ ನೀಡಲಿ ಇನ್ನೂ ಸಾಮರ್ಥ್ಯವಿಲ್ಲದವನು ಮೂರು ದಿನ ಹಜ್ಜ್ನ ವೇಳೆಯಲ್ಲೂ, ಏಳುದಿನ ಮರಳಿ ಹೋದಾಗಲೂ ಉಪವಾಸ ಆಚರಿಸಬೇಕು. ಇವು ಒಟ್ಟು ಹತ್ತು ದಿನಗಳಾದವು. ಈ ನಿಯಮವು ಯಾರ ಕುಟುಂಬವು ಮಸ್ಜಿದುಲ್ ಹರಾಮ್‌ನ ಪರಿಸರದಲ್ಲಿ ಇಲ್ಲವೋ ಅವರಿಗೆ ಅನ್ವಯವಾಗಿರುವುದು. ಓ ಜನರೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಅಲ್ಲಾಹನು ಅತ್ಯುಗ್ರವಾಗಿ ಶಿಕ್ಷಿಸುವವನಾಗಿದ್ದಾನೆಂದು ನೀವು ತಿಳಿದುಕೊಳ್ಳಿರಿ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക