Check out the new design

വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
یٰۤاَیُّهَا الَّذِیْنَ اٰمَنُوْۤا اِذَا تَدَایَنْتُمْ بِدَیْنٍ اِلٰۤی اَجَلٍ مُّسَمًّی فَاكْتُبُوْهُ ؕ— وَلْیَكْتُبْ بَّیْنَكُمْ كَاتِبٌ بِالْعَدْلِ ۪— وَلَا یَاْبَ كَاتِبٌ اَنْ یَّكْتُبَ كَمَا عَلَّمَهُ اللّٰهُ فَلْیَكْتُبْ ۚ— وَلْیُمْلِلِ الَّذِیْ عَلَیْهِ الْحَقُّ وَلْیَتَّقِ اللّٰهَ رَبَّهٗ وَلَا یَبْخَسْ مِنْهُ شَیْـًٔا ؕ— فَاِنْ كَانَ الَّذِیْ عَلَیْهِ الْحَقُّ سَفِیْهًا اَوْ ضَعِیْفًا اَوْ لَا یَسْتَطِیْعُ اَنْ یُّمِلَّ هُوَ فَلْیُمْلِلْ وَلِیُّهٗ بِالْعَدْلِ ؕ— وَاسْتَشْهِدُوْا شَهِیْدَیْنِ مِنْ رِّجَالِكُمْ ۚ— فَاِنْ لَّمْ یَكُوْنَا رَجُلَیْنِ فَرَجُلٌ وَّامْرَاَتٰنِ مِمَّنْ تَرْضَوْنَ مِنَ الشُّهَدَآءِ اَنْ تَضِلَّ اِحْدٰىهُمَا فَتُذَكِّرَ اِحْدٰىهُمَا الْاُخْرٰی ؕ— وَلَا یَاْبَ الشُّهَدَآءُ اِذَا مَا دُعُوْا ؕ— وَلَا تَسْـَٔمُوْۤا اَنْ تَكْتُبُوْهُ صَغِیْرًا اَوْ كَبِیْرًا اِلٰۤی اَجَلِهٖ ؕ— ذٰلِكُمْ اَقْسَطُ عِنْدَ اللّٰهِ وَاَقْوَمُ لِلشَّهَادَةِ وَاَدْنٰۤی اَلَّا تَرْتَابُوْۤا اِلَّاۤ اَنْ تَكُوْنَ تِجَارَةً حَاضِرَةً تُدِیْرُوْنَهَا بَیْنَكُمْ فَلَیْسَ عَلَیْكُمْ جُنَاحٌ اَلَّا تَكْتُبُوْهَا ؕ— وَاَشْهِدُوْۤا اِذَا تَبَایَعْتُمْ ۪— وَلَا یُضَآرَّ كَاتِبٌ وَّلَا شَهِیْدٌ ؕ۬— وَاِنْ تَفْعَلُوْا فَاِنَّهٗ فُسُوْقٌ بِكُمْ ؕ— وَاتَّقُوا اللّٰهَ ؕ— وَیُعَلِّمُكُمُ اللّٰهُ ؕ— وَاللّٰهُ بِكُلِّ شَیْءٍ عَلِیْمٌ ۟
ಓ ಸತ್ಯವಿಶ್ವಾಸಿಗಳೇ, ನೀವು ನಿಶ್ಚಿತಾವಧಿಗೆ ಪರಸ್ಪರ ಸಾಲದ ವ್ಯವಹಾರವನ್ನು ನಡೆಸುವುದಾದರೆ ಅದನ್ನು ನೀವು ಬರೆದಿಟ್ಟುಕೊಳ್ಳಿರಿ ಮತ್ತು ಒಬ್ಬ ಬರಹಗಾರನು ನಿಮ್ಮ ನಡುವಿನ ವ್ಯವಹಾರವನ್ನು ನ್ಯಾಯಪೂರ್ವಕವಾಗಿ ಬರೆದಿಡಲಿ. ಯಾವೊಬ್ಬ ಬರಹಗಾರನು ತನಗೆ ಅಲ್ಲಾಹನು ಕಲಿಸಿಕೊಟ್ಟಿರುವ ಪ್ರಕಾರ ಬರೆಯಲು ನಿರಾಕರಿಸದಿರಲಿ. ಆದುದರಿಂದ ಬರೆದಿಡಲಿ ಮತ್ತು ಸಾಲಗಾರನು ಹೇಳಿಕೊಟ್ಟು ಬರೆಯಿಸಲಿ. ಮತ್ತು ತನ್ನ ಪ್ರಭುವಾದ ಅಲ್ಲಾಹನನ್ನು ಭಯಪಡಲಿ ಮತ್ತು ಬಾಧ್ಯತೆಯಿಂದ ಏನನ್ನೂ ಕಡಿತಗೊಳಿಸದಿರಲಿ. ಇನ್ನು ಸಾಲಗಾರನು ಮುಗ್ಧನಾಗಿದ್ದರೆ ಅಥವಾ ದುರ್ಬಲನಾಗಿದ್ದರೆ ಅಥವಾ ಹೇಳಿಕೊಟ್ಟು ಬರೆಯಿಸಲು ಅಸಮರ್ಥನಾಗಿದ್ದರೆ, ಅವನ ಪರವಾಗಿ ಅವರ ಪೋಷಕರು ನ್ಯಾಯಪೂರ್ವಕವಾಗಿ ಬರೆಯಿಸಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ನೀವು ಸಾಕ್ಷಿಗಳನ್ನಾಗಿಸಿರಿ. ಇನ್ನು ಇಬ್ಬರು ಪುರುಷರು ಇಲ್ಲದಿದ್ದರೆ ನೀವು ಇಷ್ಟಪಡುವ ಸಾಕ್ಷಿಗಳ ಪೈಕಿ ಒಬ್ಬ ಪುರುಷ ಮತ್ತು ಇಬ್ಬರು ಸ್ತಿçÃಯರು ಸಾಕು. ಅವರಲ್ಲಿ ಒಬ್ಬಳು ಪ್ರಮಾದವೆಸಗಿದರೆ ಇನ್ನೊಬ್ಬಳು ನೆನಪಿಸಲೆಂದಾಗಿದೆ. ಸಾಕ್ಷಿಗಳನ್ನು ಸಾಕ್ಷö್ಯ ನೀಡಲಿಕ್ಕಾಗಿ ಕರೆಯಲಾದರೆ ನಿರಾಕರಿಸಬಾರದು. ಅವಧಿ ನಿಶ್ಚಯಿಸಲಾದ ವ್ಯವಹಾರವನ್ನು ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಬರೆದಿಡಲು ನೀವು ಆಲಸ್ಯ ತೋರಿಸದಿರಿ. ಅಲ್ಲಾಹನ ಬಳಿ ಈ ಸಂಗತಿಯು ಹೆಚ್ಚು ನ್ಯಾಯಪೂರ್ಣವೂ, ಸಾಕ್ಷö್ಯವನ್ನು ಬಲಪಡಿಸುವಂತದ್ದೂ ಮತ್ತು ಸಂದೇಹಗಳಿAದ ಹೆಚ್ಚು ರಕ್ಷಿಸುವಂತದ್ದೂ ಆಗಿದೆ. ಆದರೆ ಪರಸ್ಪರ ನಡೆಸುವ ನಗದು ವ್ಯವಹಾರಗಳು ಇದರ ಹೊರತಾಗಿವೆ. ಅದನ್ನು ಬರೆಯದಿರುವುದರಿಂದ ನಿಮ್ಮ ಮೇಲೆ ಯಾವ ದೋಷವೂ ಇಲ್ಲ. ನೀವು ಪರಸ್ಪರ ಕ್ರಯ-ವಿಕ್ರಯ ನಡೆಸುವಾಗಲೂ ಸಾಕ್ಷಿಯನ್ನು ನಿಶ್ಚಯಿಸಿರಿ ಮತ್ತು ಬರಹಗಾರನನ್ನಾಗಲೀ, ಸಾಕ್ಷಿದಾರನನ್ನಾಗಲೀ ಪೀಡಿಸಬಾರದು ನೀವು ಹಾಗೆ ಮಾಡುವುದಾದರೆ ಅದು ನಿಮ್ಮ ಸ್ಪಷ್ಟ ಧಿಕ್ಕಾರವಾಗಿರುತ್ತದೆ. ನೀವು ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ನಿಮಗೆ ಕಲಿಸಿ ಕೊಡುತ್ತಿದ್ದಾನೆ ಮತ್ತು ಅಲ್ಲಾಹು ಸಕಲ ವಿಷಯಗಳನ್ನು ಚೆನ್ನಾಗಿ ಅರಿಯುವವನಾಗಿದ್ದಾನೆ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി - വിവർത്തനങ്ങളുടെ സൂചിക

ശൈഖ് ബഷീർ മൈസൂരി വിവർത്തനം ചെയ്തതാണ്. മർകസ് റുവാദുത്തർജമ മേൽനോട്ടം വഹിച്ചാണ് ഇത് വികസിപ്പിച്ചെടുത്തത്.

അടക്കുക