Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
اَللّٰهُ وَلِیُّ الَّذِیْنَ اٰمَنُوْا یُخْرِجُهُمْ مِّنَ الظُّلُمٰتِ اِلَی النُّوْرِ ؕ۬— وَالَّذِیْنَ كَفَرُوْۤا اَوْلِیٰٓـُٔهُمُ الطَّاغُوْتُ یُخْرِجُوْنَهُمْ مِّنَ النُّوْرِ اِلَی الظُّلُمٰتِ ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟۠
ಸತ್ಯವಿಶ್ವಾಸಿಗಳ ರಕ್ಷಕ ಮಿತ್ರನು ಅಲ್ಲಾಹನಾಗಿದ್ದಾನೆ. ಅವನು ಅವರನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರುತ್ತಾನೆ. ಮತ್ತು ಸತ್ಯ ನಿಷೇಧಿಗಳ ಮಿತ್ರರು ಮಿಥ್ಯಾರಾಧ್ಯರಾಗಿದ್ದಾರೆ. ಅವರು ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕೊಂಡೊಯ್ಯುತ್ತಾರೆ. ಅವರು ನರಕವಾಸಿಗಳು. ಅವರು ಅದರಲ್ಲಿ ಶಾಶ್ವತರಾಗಿರುವರು.
അറബി ഖുർആൻ വിവരണങ്ങൾ:
اَلَمْ تَرَ اِلَی الَّذِیْ حَآجَّ اِبْرٰهٖمَ فِیْ رَبِّهٖۤ اَنْ اٰتٰىهُ اللّٰهُ الْمُلْكَ ۘ— اِذْ قَالَ اِبْرٰهٖمُ رَبِّیَ الَّذِیْ یُحْیٖ وَیُمِیْتُ ۙ— قَالَ اَنَا اُحْیٖ وَاُمِیْتُ ؕ— قَالَ اِبْرٰهٖمُ فَاِنَّ اللّٰهَ یَاْتِیْ بِالشَّمْسِ مِنَ الْمَشْرِقِ فَاْتِ بِهَا مِنَ الْمَغْرِبِ فَبُهِتَ الَّذِیْ كَفَرَ ؕ— وَاللّٰهُ لَا یَهْدِی الْقَوْمَ الظّٰلِمِیْنَ ۟ۚ
ಅಲ್ಲಾಹನು ಅಧಿಪತ್ಯ ನೀಡಿದ ಕಾರಣದಿಂದ (ಪೈಗಂಬರ್) ಇಬ್ರಾಹೀಮ ರೊಂದಿಗೆ ಅವರ ಪ್ರಭುವಿನ ವಿಚಾರದಲ್ಲಿ ವಾಗ್ವಾದ ನಡೆಸಿದವನ ಕಡೆಗೆ ನೀವು ನೋಡಲಿಲ್ಲವೇ? ನನ್ನ ಪ್ರಭು ಜೀವ ಮತ್ತು ಮರಣ ನೀಡುವವನಾಗಿರುವನು ಎಂದು ಇಬ್ರಾಹೀಮ್(ಅ) ಹೇಳಿದಾಗ ನಾನೂ ಜೀವ ಮತ್ತು ಮರಣವನ್ನು ಕೊಡುತ್ತೇನೆ ಎಂದು ಅವನು ಹೇಳಿದನು. ಆಗ (ಪೈಗಂಬರ್) ಇಬ್ರಾಹೀಮ್ ಹೇಳಿದರು; ಅಲ್ಲಾಹನು ಪೂರ್ವದಿಂದ ಸೂರ್ಯನನ್ನು ತರುತ್ತಾನೆ. ನೀನದನ್ನು ಪಶ್ಚಿಮದಿಂದ ತಾ. ಆಗ ಆ ಸತ್ಯನಿಷೇಧಿ ದಿಗ್ಭçಮೆಗೊಂಡನು ಮತ್ತು ಅಲ್ಲ್ಲಾಹನು ಅಕ್ರಮಿ ಜನರಿಗೆ ಸನ್ಮಾರ್ಗವನ್ನು ಕರುಣಿಸುವುದಿಲ್ಲ.
അറബി ഖുർആൻ വിവരണങ്ങൾ:
اَوْ كَالَّذِیْ مَرَّ عَلٰی قَرْیَةٍ وَّهِیَ خَاوِیَةٌ عَلٰی عُرُوْشِهَا ۚ— قَالَ اَنّٰی یُحْیٖ هٰذِهِ اللّٰهُ بَعْدَ مَوْتِهَا ۚ— فَاَمَاتَهُ اللّٰهُ مِائَةَ عَامٍ ثُمَّ بَعَثَهٗ ؕ— قَالَ كَمْ لَبِثْتَ ؕ— قَالَ لَبِثْتُ یَوْمًا اَوْ بَعْضَ یَوْمٍ ؕ— قَالَ بَلْ لَّبِثْتَ مِائَةَ عَامٍ فَانْظُرْ اِلٰی طَعَامِكَ وَشَرَابِكَ لَمْ یَتَسَنَّهْ ۚ— وَانْظُرْ اِلٰی حِمَارِكَ۫— وَلِنَجْعَلَكَ اٰیَةً لِّلنَّاسِ وَانْظُرْ اِلَی الْعِظَامِ كَیْفَ نُنْشِزُهَا ثُمَّ نَكْسُوْهَا لَحْمًا ؕ— فَلَمَّا تَبَیَّنَ لَهٗ ۙ— قَالَ اَعْلَمُ اَنَّ اللّٰهَ عَلٰی كُلِّ شَیْءٍ قَدِیْرٌ ۟
ಅಥವಾ ಛಾವಣಿಗಳೊಂದಿಗೆ ಕುಸಿದು ಬಿದ್ದಿದ್ದಂತಹ ನಾಡೊಂದನ್ನು ಹಾದು ಹೋಗುತ್ತಿದ್ದ ವ್ಯಕ್ತಿಯ ದೃಷ್ಟಾಂತವನ್ನು ನೀವು ನೋಡಲಿಲ್ಲವೇ? ಅವನು ಹೇಳಿದನು. ಇದರ ನಿರ್ಜೀವಾವಸ್ಥೆಯ ಬಳಿಕ ಅಲ್ಲಾಹನು ಇದನ್ನು ಹೇಗೆ ಜೀವಂತಗೊಳಿಸುವನು? ಆಗ ಅವನನ್ನು ಅಲ್ಲಾಹನು ನೂರು ವರ್ಷಗಳವರೆಗೆ ಮರಣಗೊಳಿಸಿದನು. ಅನಂತರ ಅವನನ್ನು ಎಬ್ಬಿಸಿ ಕೇಳಿದನು; ನಿನ್ನ ಮೇಲೆ ಎಷ್ಟು ಕಾಲ ಸರಿದಿದೆ? ಒಂದು ದಿನ ಅಥವಾ ದಿನದ ಸ್ವಲ್ಪ ಸಮಯ ಎಂದನು. ಅಲ್ಲಾಹನು ಹೇಳಿದನು; ಹಾಗಲ್ಲ! ವಸ್ತುತಃ ನೀನು ನೂರು ವರ್ಷಗಳ ಕಾಲ ಈ ಸ್ಥಿತಿಯಲಿದ್ದೆ ಇನ್ನು ನೀನು ನಿನ್ನ ಆಹಾರ ಪಾನೀಯದೆಡೆಗೆ ನೋಡು. ಒಂದಿಷ್ಟೂ ಹಾಳಾಗಿರುವುದಿಲ್ಲ. ಮತ್ತು ನಿನ್ನ ಕತ್ತೆಯೆಡೆಗೂ ನೋಡು(ಅದರ ಅಸ್ಥಿಪಂಜರವೂ ಶಿಥಿಲವಾಗಿ ಹೋಗಿದೆ). ನಾವು ನಿನ್ನನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡುತ್ತೇವೆ. ನೀನು ಎಲುಬುಗಳೆಡೆಗೆ ನೋಡು ನಾವು ಅವುಗಳನ್ನು ಹೇಗೆ ಸೃಷ್ಟಿಸುತ್ತೇವೆ ಅನಂತರ ಅವುಗಳಿಗೆ ಮಾಂಸವನ್ನು ಹೊದಿಸುತ್ತೇವೆಂದು. ಹಾಗೇಯೇ, ಅವನಿಗೆ ಎಲ್ಲವೂ ಸ್ಪಷ್ಟವಾದಾಗ ನಿಸ್ಸಂಶಯವಾಗಿಯು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನೆಂದು ನಾನು ಖಂಡಿತವಾಗಿ ಅರಿತಿದ್ದೇನೆ ಎಂದು ಹೇಳಿದನು.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക