Check out the new design

വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി * - വിവർത്തനങ്ങളുടെ സൂചിക


പരിഭാഷ അദ്ധ്യായം: ബഖറഃ   ആയത്ത്:
وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَاَمْسِكُوْهُنَّ بِمَعْرُوْفٍ اَوْ سَرِّحُوْهُنَّ بِمَعْرُوْفٍ ۪— وَلَا تُمْسِكُوْهُنَّ ضِرَارًا لِّتَعْتَدُوْا ۚ— وَمَنْ یَّفْعَلْ ذٰلِكَ فَقَدْ ظَلَمَ نَفْسَهٗ ؕ— وَلَا تَتَّخِذُوْۤا اٰیٰتِ اللّٰهِ هُزُوًا ؗ— وَّاذْكُرُوْا نِعْمَتَ اللّٰهِ عَلَیْكُمْ وَمَاۤ اَنْزَلَ عَلَیْكُمْ مِّنَ الْكِتٰبِ وَالْحِكْمَةِ یَعِظُكُمْ بِهٖ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِكُلِّ شَیْءٍ عَلِیْمٌ ۟۠
ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ನೀಡಿ ಅವರು ತಮ್ಮ ಅವಧಿಯನ್ನು ತಲುಪಿದರೆ ಒಂದೋ ಅವರನ್ನು ಸದಾಚಾರದೊಂದಿಗೆ (ದಾಂಪತ್ಯದಲ್ಲಿ) ತಡೆÀದಿರಿಸಿಕೊಳ್ಳಿರಿ, ಇಲ್ಲವೇ, ಅವರಿಗೆ ಸದಾಚಾರದೊಂದಿಗೆ ವಿದಾಯ ಹೇಳಿರಿ ಮತ್ತು ಅವರನ್ನು ಪೀಡಿಸುವ ಉದ್ದೇಶದಿಂದ ತಡೆದಿರಿಸಿಕೊಳ್ಳಬೇಡಿರಿ ಮತ್ತು ಯಾರು ಹೀಗೆ ಮಾಡುತ್ತಾನೋ ಅವನು ತನ್ನ ಮೇಲೆಯೇ ಅಕ್ರಮವೆಸಗುತ್ತಾನೆ. ಮತ್ತು ನೀವು ಅಲ್ಲಾಹನ ನಿಯಮಗಳನ್ನು ಅಪಹಾಸ್ಯದ ವಸ್ತುವನ್ನಾಗಿ ಮಾಡಿಕೊಳ್ಳಬೇಡಿರಿ ಮತ್ತು ನಿಮ್ಮ ಮೇಲಿರುವ ಅಲ್ಲಾಹನ ಉಪಕಾರವನ್ನು ಸ್ಮರಿಸಿರಿ ಮತ್ತು ಅವನು ನಿಮ್ಮ ಮೇಲೆ ಅವತೀರ್ಣಗೊಳಿಸಿದ ಗ್ರಂಥ ಹಾಗೂ ಸುಜ್ಞಾನವನ್ನು ಸ್ಮರಿಸಿರಿ. ಅದರ ಮೂಲಕ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ. ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ಹಾಗೂ ನಿಜವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಸರ್ವಜ್ಞಾನಿಯಾಗಿರುವನು ಎಂಬುದನ್ನು ನೀವು ಅರಿತುಕೊಳ್ಳಿರಿ.
അറബി ഖുർആൻ വിവരണങ്ങൾ:
وَاِذَا طَلَّقْتُمُ النِّسَآءَ فَبَلَغْنَ اَجَلَهُنَّ فَلَا تَعْضُلُوْهُنَّ اَنْ یَّنْكِحْنَ اَزْوَاجَهُنَّ اِذَا تَرَاضَوْا بَیْنَهُمْ بِالْمَعْرُوْفِ ؕ— ذٰلِكَ یُوْعَظُ بِهٖ مَنْ كَانَ مِنْكُمْ یُؤْمِنُ بِاللّٰهِ وَالْیَوْمِ الْاٰخِرِ ؕ— ذٰلِكُمْ اَزْكٰی لَكُمْ وَاَطْهَرُ ؕ— وَاللّٰهُ یَعْلَمُ وَاَنْتُمْ لَا تَعْلَمُوْنَ ۟
ಮತ್ತು ನೀವು ಪತ್ನಿಯರಿಗೆ ವಿಚ್ಛೇದನೆ ಕೊಟ್ಟು ಅವರು ತಮ್ಮ ಅವಧಿಯನ್ನು ಪೂರ್ತಿಗೊಳಿಸದರೆ (ದಾಂಪತ್ಯದಲ್ಲಿ) ಅವರು ಸದಾಚಾರ ಪ್ರಕಾರ ಪರಸ್ಪರರ ನಡುವೆ ಸಂತೃಪ್ತರಾಗಿ ತಮ್ಮ ಹಿಂದಿನ ಪತಿಯರನ್ನು ವಿವಾಹ ಮಾಡಿಕೊಳ್ಳುವುದರಿಂದ ನೀವು ಅವರನ್ನು ತಡೆಯಬೇಡಿರಿ. ಇದು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿರಿಸುವವನಿಗೆ ನೀಡಲಾಗುವ ಉಪದೇಶವಾಗಿದೆ. ಇದು ನಿಮ್ಮ ಪಾಲಿಗೆ ಅತ್ಯಂತ ಶುದ್ಧವೂ, ಅತ್ಯಂತ ಸ್ವಚ್ಛವೂ ಆಗಿದೆ ಮತ್ತು ಅಲ್ಲಾಹನು ಅರಿಯುತ್ತಾನೆ, ನೀವು ಅರಿಯುವುದಿಲ್ಲ.
അറബി ഖുർആൻ വിവരണങ്ങൾ:
وَالْوَالِدٰتُ یُرْضِعْنَ اَوْلَادَهُنَّ حَوْلَیْنِ كَامِلَیْنِ لِمَنْ اَرَادَ اَنْ یُّتِمَّ الرَّضَاعَةَ ؕ— وَعَلَی الْمَوْلُوْدِ لَهٗ رِزْقُهُنَّ وَكِسْوَتُهُنَّ بِالْمَعْرُوْفِ ؕ— لَا تُكَلَّفُ نَفْسٌ اِلَّا وُسْعَهَا ۚ— لَا تُضَآرَّ وَالِدَةٌ بِوَلَدِهَا وَلَا مَوْلُوْدٌ لَّهٗ بِوَلَدِهٖ ۗ— وَعَلَی الْوَارِثِ مِثْلُ ذٰلِكَ ۚ— فَاِنْ اَرَادَا فِصَالًا عَنْ تَرَاضٍ مِّنْهُمَا وَتَشَاوُرٍ فَلَا جُنَاحَ عَلَیْهِمَا ؕ— وَاِنْ اَرَدْتُّمْ اَنْ تَسْتَرْضِعُوْۤا اَوْلَادَكُمْ فَلَا جُنَاحَ عَلَیْكُمْ اِذَا سَلَّمْتُمْ مَّاۤ اٰتَیْتُمْ بِالْمَعْرُوْفِ ؕ— وَاتَّقُوا اللّٰهَ وَاعْلَمُوْۤا اَنَّ اللّٰهَ بِمَا تَعْمَلُوْنَ بَصِیْرٌ ۟
ಹಾಲುಣಿಸುವ ಅವಧಿಯನ್ನು ಪೂರ್ಣಗೊಳಿಸಲು ಉದ್ದೇಶಿಸುವ ವಿಚ್ಛೇದಿತ ತಾಯಂದಿರು ತಮ್ಮ ಮಕ್ಕಳಿಗೆ ಪೂರ್ಣ ಎರಡು ವರ್ಷಗಳ ಕಾಲ ಹಾಲುಣಿಸಲಿ ಮತ್ತು ತಂದೆಯ ಮೇಲೆ ಸದಾಚಾರದೊಂದಿಗೆ ಅವರ ಆಹಾರ ಹಾಗೂ ವಸ್ತçದ ಹೊಣೆಯು ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕನುಗುಣವಾಗಿಯೇ ಹೊಣೆಗಾರಾನಾಗುತ್ತಾನೆ. ತಾಯಿಯನ್ನು ತನ್ನ ಮಗುವಿನ ನಿಮತ್ತ ತೊಂದರೆಗೊಳಪಡಿಸಬಾರದು ತಂದೆಯನ್ನು ತನ್ನ ಮಗುವಿನ ನಿಮಿತ್ತ ತೊಂದರೆಗೊಳಪಡಿಸಬಾರದು. (ಅನಾಥಮಗುವಿನ) ವಾರೀಸುದಾರನ ಮೇಲೂ ಅದೇ ರೀತಿಯ ಹೊಣೆಗಾರಿಕೆಯಿದೆ. ಇನ್ನು ಅವರಿಬ್ಬರೂ (ತಂದೆ ತಾಯಿಯು) ಪರಸ್ಪರ ಸಮಾಲೋಚನೆಯಿಂದ ಹಾಲುಣಿಸುದನ್ನು ಉದ್ದೇಶಿಸಿದರೆ ಆಗ ಅವರಿಬ್ಬರ ಮೇಲೆ ಯಾವ ದೋಷವಿರುದಿಲ್ಲ ಮತ್ತು ನೀವು ನಿಮ್ಮ ಮಕ್ಕಳಿಗೆ ಬೇರೆ ಸ್ತಿçÃಯರಿಂದ ಸ್ತನಪಾನ ಮಾಡಿಸಲು ಇಚ್ಛಿಸಿದರು ನೀವು ಸದಾಚಾರದೊಂದಿಗೆ, ನೀಡಲು ನಿಶ್ಚಯಿಸಿರುವುದನ್ನು ನೀಡಿದರೆ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ ನಿಸ್ಸಂಶಯವಾಗಿಯು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಮೇಲ್ವಿಚಾರಣೆ ಮಾಡುತ್ತಿದ್ದಾನೆ ಎಂಬುದನ್ನು ಅರಿತುಕೊಳ್ಳಿರಿ.
അറബി ഖുർആൻ വിവരണങ്ങൾ:
 
പരിഭാഷ അദ്ധ്യായം: ബഖറഃ
സൂറത്തുകളുടെ സൂചിക പേജ് നമ്പർ
 
വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി - വിവർത്തനങ്ങളുടെ സൂചിക

വിവർത്തനം - ശൈഖ് ബഷീർ മൈസൂരി. മർകസ് റുവാദ് തർജമയുടെ മേൽനോട്ടത്തിൽ വികസിപ്പിച്ചത്.

അടക്കുക