Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាន់ណះល៍   អាយ៉ាត់:
اَلَّذِیْنَ كَفَرُوْا وَصَدُّوْا عَنْ سَبِیْلِ اللّٰهِ زِدْنٰهُمْ عَذَابًا فَوْقَ الْعَذَابِ بِمَا كَانُوْا یُفْسِدُوْنَ ۟
ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ—ಅವರಿಗೆ ನಾವು ಶಿಕ್ಷೆಯ ಮೇಲೆ ಶಿಕ್ಷೆಯನ್ನು ಹೆಚ್ಚಿಸುವೆವು. ಇದು ಅವರು ಮಾಡಿದ ಕಿಡಿಗೇಡಿತನದ ಪ್ರತಿಫಲವಾಗಿದೆ.
តាហ្វសៀរជាភាសា​អារ៉ាប់ជាច្រេីន:
وَیَوْمَ نَبْعَثُ فِیْ كُلِّ اُمَّةٍ شَهِیْدًا عَلَیْهِمْ مِّنْ اَنْفُسِهِمْ وَجِئْنَا بِكَ شَهِیْدًا عَلٰی هٰۤؤُلَآءِ ؕ— وَنَزَّلْنَا عَلَیْكَ الْكِتٰبَ تِبْیَانًا لِّكُلِّ شَیْءٍ وَّهُدًی وَّرَحْمَةً وَّبُشْرٰی لِلْمُسْلِمِیْنَ ۟۠
(ಪ್ರವಾದಿಯವರೇ) ನಾವು ಎಲ್ಲಾ ಸಮುದಾಯಗಳ ವಿರುದ್ಧ ಅವರಿಂದಲೇ ಒಬ್ಬ ಸಾಕ್ಷಿಯನ್ನು ನಿಲ್ಲಿಸುವ ಮತ್ತು ಇವರ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ನಿಲ್ಲಿಸುವ ದಿನ! ಎಲ್ಲಾ ವಿಷಯಗಳಿಗೂ ವಿವರಣೆ ನೀಡುವ ಈ ಗ್ರಂಥವನ್ನು ನಾವು ನಿಮಗೆ ಅವತೀರ್ಣಗೊಳಿಸಿದ್ದೇವೆ. ಇದು ಮುಸಲ್ಮಾನರಿಗೆ ಸನ್ಮಾರ್ಗದರ್ಶಿ, ದಯೆ ಮತ್ತು ಸುವಾರ್ತೆಯಾಗಿದೆ.
តាហ្វសៀរជាភាសា​អារ៉ាប់ជាច្រេីន:
اِنَّ اللّٰهَ یَاْمُرُ بِالْعَدْلِ وَالْاِحْسَانِ وَاِیْتَآئِ ذِی الْقُرْبٰی وَیَنْهٰی عَنِ الْفَحْشَآءِ وَالْمُنْكَرِ وَالْبَغْیِ ۚ— یَعِظُكُمْ لَعَلَّكُمْ تَذَكَّرُوْنَ ۟
ನಿಶ್ಚಯವಾಗಿಯೂ, ಅಲ್ಲಾಹು ನ್ಯಾಯವನ್ನು, ಒಳಿತನ್ನು ಮತ್ತು ಹತ್ತಿರದ ಸಂಬಂಧಿಕರಿಗೆ (ನೆರವು) ನೀಡಲು ಆಜ್ಞಾಪಿಸುತ್ತಾನೆ. ಅಶ್ಲೀಲಕೃತ್ಯಗಳು, ದುರಾಚಾರಗಳು ಮತ್ತು ಅತಿರೇಕಗಳನ್ನು ವಿರೋಧಿಸುತ್ತಾನೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
وَاَوْفُوْا بِعَهْدِ اللّٰهِ اِذَا عٰهَدْتُّمْ وَلَا تَنْقُضُوا الْاَیْمَانَ بَعْدَ تَوْكِیْدِهَا وَقَدْ جَعَلْتُمُ اللّٰهَ عَلَیْكُمْ كَفِیْلًا ؕ— اِنَّ اللّٰهَ یَعْلَمُ مَا تَفْعَلُوْنَ ۟
ನೀವು ಕರಾರು ಮಾಡಿದರೆ ಅಲ್ಲಾಹನ ಕರಾರನ್ನು ನೆರವೇರಿಸಿರಿ. ನೀವು ಆಣೆಗಳನ್ನು—ಅವುಗಳನ್ನು ಖಾತ್ರಿಪಡಿಸಿದ ನಂತರ ಮುರಿಯಲು ಹೋಗಬೇಡಿ. ನೀವಂತೂ ಅಲ್ಲಾಹನನ್ನು ನಿಮಗೆ ಜಾಮೀನಾಗಿ ನಿಲ್ಲಿಸಿದ್ದೀರಿ. ನಿಶ್ಚಯವಾಗಿಯೂ ನೀವು ಮಾಡುವ ಕರ್ಮಗಳನ್ನು ಅಲ್ಲಾಹು ತಿಳಿಯುತ್ತಾನೆ.
តាហ្វសៀរជាភាសា​អារ៉ាប់ជាច្រេីន:
وَلَا تَكُوْنُوْا كَالَّتِیْ نَقَضَتْ غَزْلَهَا مِنْ بَعْدِ قُوَّةٍ اَنْكَاثًا ؕ— تَتَّخِذُوْنَ اَیْمَانَكُمْ دَخَلًا بَیْنَكُمْ اَنْ تَكُوْنَ اُمَّةٌ هِیَ اَرْبٰی مِنْ اُمَّةٍ ؕ— اِنَّمَا یَبْلُوْكُمُ اللّٰهُ بِهٖ ؕ— وَلَیُبَیِّنَنَّ لَكُمْ یَوْمَ الْقِیٰمَةِ مَا كُنْتُمْ فِیْهِ تَخْتَلِفُوْنَ ۟
ನೂಲನ್ನು ಗಟ್ಟಿಯಾಗಿ ಸುತ್ತಿದ ಬಳಿಕ ಅದನ್ನು ಎಳೆ ಎಳೆಯಾಗಿ ಬಿಡಿಸಿ ಎಸೆಯುವ ಮಹಿಳೆಯಂತೆ ನೀವಾಗಬೇಡಿ—ನಿಮ್ಮಲ್ಲೊಂದು ಗುಂಪು ಇನ್ನೊಂದು ಗುಂಪಿಗಿಂತ ಹೆಚ್ಚಾಗಿರುವ ಕಾರಣ ನೀವು ನಿಮ್ಮ ಆಣೆಗಳನ್ನು (ಕರಾರುಗಳನ್ನು) ಪರಸ್ಪರ ವಂಚನೆಯ ಮಾರ್ಗವಾಗಿ ಮಾಡುತ್ತಿದ್ದೀರಿ.[1] ಅಲ್ಲಾಹು ಅದರ ಮೂಲಕ ಕೇವಲ ನಿಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಯಾವ ವಿಷಯದಲ್ಲಿ ನೀವು ಭಿನ್ನಮತ ತಳೆದಿದ್ದಿರೋ ಅದನ್ನು ಪುನರುತ್ಥಾನ ದಿನದಂದು ಅವನು ನಿಮಗೆ ಖಂಡಿತ ವಿವರಿಸಿಕೊಡುವನು.
[1] ಅಂದರೆ ನಾವು ಯಾವುದೇ ಸ್ಥಿತಿಯಲ್ಲೂ ನಿಮಗೆ ಸಹಾಯ ಮಾಡುತ್ತೇವೆಂದು ಒಂದು ಗುಂಪಿಗೆ ವಾಗ್ದಾನ ಮಾಡಿ ಅವರೊಡನೆ ಮೈತ್ರಿಯ ಕರಾರು ಮಾಡುತ್ತೀರಿ. ನಂತರ ಅವರಿಗೆ ವಿರುದ್ಧವಾಗಿ ಅವರಿಗಿಂತಲೂ ಹೆಚ್ಚು ಜನಬಲ ಅಥವಾ ಧನಬಲವಿರುವ ಗುಂಪಿನೊಂದಿಗೆ ಮೈತ್ರಿ ಮಾಡುವ ಅವಕಾಶ ಸಿಕ್ಕಿದರೆ ಮೊದಲನೆ ಗುಂಪಿನೊಂದಿಗೆ ಮಾಡಿದ ಕರಾರನ್ನು ಎಸೆದು ಈ ಗುಂಪಿನೊಂದಿಗೆ ಮೈತ್ರಿಯ ಕರಾರು ಮಾಡಿಕೊಳ್ಳುತ್ತೀರಿ. ಇಂತಹ ಸ್ಥಿತಿಯು ಇಸ್ಲಾಮೀ ಪೂರ್ವ ಜಾಹಿಲೀ ಕಾಲದಲ್ಲಿ ಸಾಮಾನ್ಯವಾಗಿತ್ತು. ಇದನ್ನು ಇಸ್ಲಾಂ ವಿರೋಧಿಸುತ್ತದೆ.
តាហ្វសៀរជាភាសា​អារ៉ាប់ជាច្រេីន:
وَلَوْ شَآءَ اللّٰهُ لَجَعَلَكُمْ اُمَّةً وَّاحِدَةً وَّلٰكِنْ یُّضِلُّ مَنْ یَّشَآءُ وَیَهْدِیْ مَنْ یَّشَآءُ ؕ— وَلَتُسْـَٔلُنَّ عَمَّا كُنْتُمْ تَعْمَلُوْنَ ۟
ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ಇಚ್ಛಿಸುವವರನ್ನು ಅವನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ನಿಮ್ಮೊಡನೆ ಖಂಡಿತ ಪ್ರಶ್ನಿಸಲಾಗುವುದು.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់ណះល៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ