Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាន់ណះល៍   អាយ៉ាត់:
وَمَاۤ اَرْسَلْنَا مِنْ قَبْلِكَ اِلَّا رِجَالًا نُّوْحِیْۤ اِلَیْهِمْ فَسْـَٔلُوْۤا اَهْلَ الذِّكْرِ اِنْ كُنْتُمْ لَا تَعْلَمُوْنَ ۟ۙ
ನಿಮಗಿಂತ ಮೊದಲು ನಾವು ಸಂದೇಶವಾಹಕರನ್ನಾಗಿ ಪುರುಷರನ್ನು ಮಾತ್ರ ಕಳುಹಿಸಿದ್ದೆವು. ಅವರಿಗೆ ನಾವು ದೇವವಾಣಿಯನ್ನು ನೀಡುತ್ತಿದ್ದೆವು. ನಿಮಗೆ ಅರಿವಿಲ್ಲದಿದ್ದರೆ ವಿದ್ವಾಂಸರೊಡನೆ ಕೇಳಿ ನೋಡಿ.[1]
[1] ವಿದ್ವಾಂಸರು ಎಂದರೆ ಯಹೂದಿಗಳು ಮತ್ತು ಕ್ರೈಸ್ತರಲ್ಲಿರುವ ವಿದ್ವಾಂಸರು. ಈ ಮಾತಿನ ಅರ್ಥವೇನೆಂದರೆ, ಅಲ್ಲಾಹು ಕಳುಹಿಸಿದ ಪ್ರವಾದಿಗಳೆಲ್ಲರೂ ಮನುಷ್ಯರಾಗಿದ್ದರು. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನುಷ್ಯರಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಅವರಿಗಿಂತ ಮೊದಲು ಬಂದ ಸಂದೇಶವಾಹಕರುಗಳು ಮನುಷ್ಯರಾಗಿದ್ದರೋ ಅಲ್ಲವೋ ಎಂದು ನಿಮಗೆ ಸಂಶಯವಿದ್ದರೆ ಯಹೂದಿ-ಕ್ರೈಸ್ತರಲ್ಲಿರುವ ವಿದ್ವಾಂಸರೊಡನೆ ಕೇಳಿ ನೋಡಿ.
តាហ្វសៀរជាភាសា​អារ៉ាប់ជាច្រេីន:
بِالْبَیِّنٰتِ وَالزُّبُرِ ؕ— وَاَنْزَلْنَاۤ اِلَیْكَ الذِّكْرَ لِتُبَیِّنَ لِلنَّاسِ مَا نُزِّلَ اِلَیْهِمْ وَلَعَلَّهُمْ یَتَفَكَّرُوْنَ ۟
ಸ್ಪಷ್ಟ ಸಾಕ್ಷ್ಯಾಧಾರಗಳು ಮತ್ತು ಗ್ರಂಥಗಳೊಂದಿಗೆ (ನಾವು ಅವರನ್ನು ಕಳುಹಿಸಿದ್ದೇವೆ). (ಪ್ರವಾದಿಯವರೇ) ನಾವು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿರುವುದು ಜನರಿಗೆ ಅವತೀರ್ಣವಾದ ಸಂದೇಶವನ್ನು ನೀವು ಅವರಿಗೆ ವಿವರಿಸಿಕೊಡುವುದಕ್ಕಾಗಿ ಮತ್ತು ಅವರು ಆಲೋಚಿಸುವುದಕ್ಕಾಗಿ.
តាហ្វសៀរជាភាសា​អារ៉ាប់ជាច្រេីន:
اَفَاَمِنَ الَّذِیْنَ مَكَرُوا السَّیِّاٰتِ اَنْ یَّخْسِفَ اللّٰهُ بِهِمُ الْاَرْضَ اَوْ یَاْتِیَهُمُ الْعَذَابُ مِنْ حَیْثُ لَا یَشْعُرُوْنَ ۟ۙ
ಕೆಟ್ಟ ಪಿತೂರಿಗಳನ್ನು ಮಾಡುವವರು—ಅವರನ್ನು ಅಲ್ಲಾಹು ಭೂಮಿಯಲ್ಲಿ ಹುದುಗಿಸಿ ಬಿಡಲಾರನು ಅಥವಾ ಅವರು ನಿರೀಕ್ಷಿಸದ ಕಡೆಯಿಂದ ಅವರಿಗೆ ಶಿಕ್ಷೆಯು ಬಂದೆರಗಲಾರದು ಎಂದು ನಿರ್ಭಯರಾಗಿದ್ದಾರೆಯೇ?
តាហ្វសៀរជាភាសា​អារ៉ាប់ជាច្រេីន:
اَوْ یَاْخُذَهُمْ فِیْ تَقَلُّبِهِمْ فَمَا هُمْ بِمُعْجِزِیْنَ ۟ۙ
ಅಥವಾ ಅವರು ತಮ್ಮ ಕೆಲಸ-ಕಾರ್ಯಗಳಲ್ಲಿ ನಿರತರಾಗಿರುವಾಗ ಅಲ್ಲಾಹು ಅವರನ್ನು ಹಿಡಿಯಲಾರನೆಂದು (ಅವರು ನಿರ್ಭಯರಾಗಿದ್ದಾರೆಯೇ)? ಏನೇ ಆದರೂ ಅಲ್ಲಾಹನನ್ನು ಸೋಲಿಸಲು ಅವರಿಗೆ ಸಾಧ್ಯವಿಲ್ಲ.
តាហ្វសៀរជាភាសា​អារ៉ាប់ជាច្រេីន:
اَوْ یَاْخُذَهُمْ عَلٰی تَخَوُّفٍ ؕ— فَاِنَّ رَبَّكُمْ لَرَءُوْفٌ رَّحِیْمٌ ۟
ಅಥವಾ ಅವರನ್ನು ಹೆದರುವಂತೆ ಮಾಡಿ ಹಿಡಿಯಲಾರನೆಂದು (ಅವರು ನಿರ್ಭಯರಾಗಿದ್ದಾರೆಯೇ)? ಆದರೆ ನಿಮ್ಮ ಪರಿಪಾಲಕನು (ಅಲ್ಲಾಹು) ಅತ್ಯಂತ ಸಹಾನುಭೂತಿಯುಳ್ಳವನು ಮತ್ತು ಅತ್ಯಧಿಕ ದಯೆ ತೋರುವವನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
اَوَلَمْ یَرَوْا اِلٰی مَا خَلَقَ اللّٰهُ مِنْ شَیْءٍ یَّتَفَیَّؤُا ظِلٰلُهٗ عَنِ الْیَمِیْنِ وَالشَّمَآىِٕلِ سُجَّدًا لِّلّٰهِ وَهُمْ دٰخِرُوْنَ ۟
ಅಲ್ಲಾಹು ಸೃಷ್ಟಿಸಿದ ಯಾವುದಾದರೂ ವಸ್ತುವನ್ನು ಅವರು ನೋಡುವುದಿಲ್ಲವೇ? ಅದರ ನೆರಳು ಬಲಭಾಗದಲ್ಲೂ ಎಡಭಾಗದಲ್ಲೂ ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತದೆ ಮತ್ತು ತನ್ನ ವಿನಮ್ರತೆಯನ್ನು ವ್ಯಕ್ತಪಡಿಸುತ್ತದೆ.
តាហ្វសៀរជាភាសា​អារ៉ាប់ជាច្រេីន:
وَلِلّٰهِ یَسْجُدُ مَا فِی السَّمٰوٰتِ وَمَا فِی الْاَرْضِ مِنْ دَآبَّةٍ وَّالْمَلٰٓىِٕكَةُ وَهُمْ لَا یَسْتَكْبِرُوْنَ ۟
ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಜೀವರಾಶಿಗಳು ಮತ್ತು ಎಲ್ಲಾ ದೇವದೂತರುಗಳು ಅಲ್ಲಾಹನಿಗೆ ಸಾಷ್ಟಾಂಗ ಮಾಡುತ್ತಾರೆ. ಅವರು ಅಹಂಕಾರ ತೋರುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
یَخَافُوْنَ رَبَّهُمْ مِّنْ فَوْقِهِمْ وَیَفْعَلُوْنَ مَا یُؤْمَرُوْنَ ۟
ಅವರು (ದೇವದೂತರು) ತಮ್ಮ ಮೇಲ್ಭಾಗದಲ್ಲಿರುವ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುತ್ತಾರೆ. ಅವರಿಗೆ ಆದೇಶಿಸಲಾಗುವುದನ್ನು ನಿರ್ವಹಿಸುತ್ತಾರೆ.
តាហ្វសៀរជាភាសា​អារ៉ាប់ជាច្រេីន:
وَقَالَ اللّٰهُ لَا تَتَّخِذُوْۤا اِلٰهَیْنِ اثْنَیْنِ ۚ— اِنَّمَا هُوَ اِلٰهٌ وَّاحِدٌ ۚ— فَاِیَّایَ فَارْهَبُوْنِ ۟
ಅಲ್ಲಾಹು ಹೇಳಿದನು: “ನೀವು ಎರಡು ದೇವರುಗಳನ್ನು ಸ್ವೀಕರಿಸಬೇಡಿ. ಏಕೈಕ ದೇವನು ಅವನು (ಅಲ್ಲಾಹು) ಮಾತ್ರ. ಆದ್ದರಿಂದ ನೀವು ನನ್ನನ್ನು ಮಾತ್ರ ಭಯಪಡಿರಿ.”
តាហ្វសៀរជាភាសា​អារ៉ាប់ជាច្រេីន:
وَلَهٗ مَا فِی السَّمٰوٰتِ وَالْاَرْضِ وَلَهُ الدِّیْنُ وَاصِبًا ؕ— اَفَغَیْرَ اللّٰهِ تَتَّقُوْنَ ۟
ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಆರಾಧನೆ ಅವನಿಗೆ ಮಾತ್ರ ಸಲ್ಲತಕ್ಕದ್ದು. ಆದರೂ ನೀವು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಭಯಪಡುತ್ತೀರಾ?
តាហ្វសៀរជាភាសា​អារ៉ាប់ជាច្រេីន:
وَمَا بِكُمْ مِّنْ نِّعْمَةٍ فَمِنَ اللّٰهِ ثُمَّ اِذَا مَسَّكُمُ الضُّرُّ فَاِلَیْهِ تَجْـَٔرُوْنَ ۟ۚ
ನಿಮ್ಮಲ್ಲಿ ಬಳಿ ಯಾವುದೇ ಅನುಗ್ರಹಗಳಿದ್ದರೂ ಅದು ಅಲ್ಲಾಹು ನೀಡಿದ್ದಾಗಿದೆ. ನಂತರ ನಿಮಗೇನಾದರೂ ತೊಂದರೆ ಸಂಭವಿಸಿದರೆ ನೀವು ಅವನಲ್ಲೇ ಮೊರೆಯಿಡುತ್ತೀರಿ.
តាហ្វសៀរជាភាសា​អារ៉ាប់ជាច្រេីន:
ثُمَّ اِذَا كَشَفَ الضُّرَّ عَنْكُمْ اِذَا فَرِیْقٌ مِّنْكُمْ بِرَبِّهِمْ یُشْرِكُوْنَ ۟ۙ
ನಂತರ ಅವನು ನಿಮ್ಮಿಂದ ಆ ತೊಂದರೆಯನ್ನು ನಿವಾರಿಸಿದರೆ, ಅಗೋ ನಿಮ್ಮಲ್ಲೊಂದು ಗುಂಪು ತಮ್ಮ ಪರಿಪಾಲಕನೊಡನೆ (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಾರೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់ណះល៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ