Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាន់ណះល៍   អាយ៉ាត់:
لِیَكْفُرُوْا بِمَاۤ اٰتَیْنٰهُمْ ؕ— فَتَمَتَّعُوْا ۫— فَسَوْفَ تَعْلَمُوْنَ ۟
ನಾವು ಅವರಿಗೆ ದಯಪಾಲಿಸಿದ ಅನುಗ್ರಹಗಳನ್ನು ಅವರು ನಿಷೇಧಿಸುತ್ತಾರೆ. ನೀವು ಆನಂದಿಸಿ. ಸದ್ಯವೇ ನೀವು ತಿಳಿಯುವಿರಿ.
តាហ្វសៀរជាភាសា​អារ៉ាប់ជាច្រេីន:
وَیَجْعَلُوْنَ لِمَا لَا یَعْلَمُوْنَ نَصِیْبًا مِّمَّا رَزَقْنٰهُمْ ؕ— تَاللّٰهِ لَتُسْـَٔلُنَّ عَمَّا كُنْتُمْ تَفْتَرُوْنَ ۟
ನಾವು ಅವರಿಗೆ ಒದಗಿಸಿರುವುದರಲ್ಲಿ ಒಂದಂಶವನ್ನು ಅವರು ಅವರಿಗೆ ಯಾವುದೇ ಪರಿಚಯವಿಲ್ಲದ ದೇವರುಗಳಿಗೆ ಮೀಸಲಿಡುತ್ತಾರೆ.[1] ಅಲ್ಲಾಹನಾಣೆ! ನಿಮ್ಮ ಈ ಸುಳ್ಳಾರೋಪಗಳ ಬಗ್ಗೆ ನಿಮ್ಮೊಡನೆ ಖಂಡಿತ ಪ್ರಶ್ನಿಸಲಾಗುವುದು.
[1] ಅವರು ದೇವರುಗಳೆಂದು ಆರಾಧಿಸುತ್ತಿರುವುದು ಒಂದೋ ವಿಗ್ರಹಗಳು, ಅಥವಾ ಜಿನ್ನ್‌ಗಳು ಅಥವಾ ಪಿಶಾಚಿಗಳನ್ನಾಗಿದೆ. ಅವರ ನಿಜಸ್ಥಿತಿಯೇನೆಂದು ಆರಾಧಿಸುವವರಿಗೆ ತಿಳಿದಿಲ್ಲ. ಅದೇ ರೀತಿ ಸಮಾಧಿಯಲ್ಲಿರುವ ಮಹಾಪುರುಷರನ್ನು ಆರಾಧಿಸುವವರು ಕೂಡ. ಅವರು ನಿಜವಾಗಿಯೂ ದೇವರುಗಳೇ? ಅವರು ಪ್ರಾರ್ಥಿಸಲು ಅರ್ಹರೇ? ಪ್ರಾರ್ಥಿಸಿದರೆ ಅವರು ಉತ್ತರ ನೀಡುತ್ತಾರೆಯೇ? ಮುಂತಾದ ಯಾವುದೂ ಆರಾಧಿಸುವವರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಯಾವುದೇ ಸ್ಪಷ್ಟ ಆಧಾರವಿಲ್ಲದಿದ್ದರೂ ಅವರು ಅಲ್ಲಾಹನನ್ನು ಬಿಟ್ಟು ಆ ದೇವರುಗಳನ್ನು ಆರಾಧಿಸುತ್ತಾರೆ. ಅಲ್ಲಾಹು ಒದಗಿಸಿದ ಧನವನ್ನು ಆ ದೇವರುಗಳಿಗೆ ಕಾಣಿಕೆ ಹಾಕುತ್ತಾರೆ ಮತ್ತು ಅವರ ಮೇಲೆ ಹರಕೆ ಹೊರುತ್ತಾರೆ.
តាហ្វសៀរជាភាសា​អារ៉ាប់ជាច្រេីន:
وَیَجْعَلُوْنَ لِلّٰهِ الْبَنٰتِ سُبْحٰنَهٗ ۙ— وَلَهُمْ مَّا یَشْتَهُوْنَ ۟
ಅವರು ಅಲ್ಲಾಹನಿಗೆ ಹೆಣ್ಣು ಮಕ್ಕಳಿದ್ದಾರೆಂದು ಆರೋಪಿಸುತ್ತಾರೆ. ಅಲ್ಲಾಹು ಪರಿಶುದ್ಧನು! ಆದರೆ ಅವರಿಗೆ ಅವರು ಬಯಸುವುದನ್ನೇ (ಗಂಡು ಮಕ್ಕಳನ್ನು) ಇಟ್ಟುಕೊಂಡಿದ್ದಾರೆ.
តាហ្វសៀរជាភាសា​អារ៉ាប់ជាច្រេីន:
وَاِذَا بُشِّرَ اَحَدُهُمْ بِالْاُ ظَلَّ وَجْهُهٗ مُسْوَدًّا وَّهُوَ كَظِیْمٌ ۟ۚ
ಅವರಲ್ಲೊಬ್ಬನಿಗೆ ಒಂದು ಹೆಣ್ಣು ಮಗುವಿನ ಜನನದ ಬಗ್ಗೆ ಶುಭ ಸುದ್ದಿಯನ್ನು ತಿಳಿಸಲಾದರೆ, ಅವನ ಮುಖವು ಕಪ್ಪಿಡುತ್ತದೆ ಮತ್ತು (ಹೃದಯದಲ್ಲಿ) ರೋಷ ಉಕ್ಕುತ್ತದೆ.
តាហ្វសៀរជាភាសា​អារ៉ាប់ជាច្រេីន:
یَتَوَارٰی مِنَ الْقَوْمِ مِنْ سُوْٓءِ مَا بُشِّرَ بِهٖ ؕ— اَیُمْسِكُهٗ عَلٰی هُوْنٍ اَمْ یَدُسُّهٗ فِی التُّرَابِ ؕ— اَلَا سَآءَ مَا یَحْكُمُوْنَ ۟
ಆ ಕೆಟ್ಟ ವಾರ್ತೆಯ ಕಾರಣದಿಂದಾಗಿ ಅವನು ಜನರಿಂದ ಅಡಗುತ್ತಾನೆ. ಆ ಮಗುವನ್ನು ಸಾಕಬೇಕೋ ಅಥವಾ ಮಣ್ಣಿನಲ್ಲಿ ದಫನ ಮಾಡಬೇಕೋ? ಎಂದು ಅವನು ಯೋಚಿಸುತ್ತಾನೆ. ಅವರು ಮಾಡುವ ತೀರ್ಮಾನವು ಬಹಳ ನಿಕೃಷ್ಟವಾಗಿದೆ.[1]
[1] ಮಕ್ಕಾದ ಬಹುದೇವಾರಾಧಕರಿಗೆ ಒಂದು ಹೆಣ್ಣು ಮಗು ಹುಟ್ಟಿದರೆ ಅವರು ಅದನ್ನು ಅನಿಷ್ಟವೆಂದು ಪರಿಗಣಿಸಿ ಜೀವಂತ ಹೂಳುತ್ತಾರೆ. ಹೆಣ್ಣು ಮಗು ಎಂಬ ಕಳಂಕವನ್ನು ಜೀವನವಿಡೀ ಹೊತ್ತುಕೊಂಡು ಆ ಮಗುವನ್ನು ಸಾಕಲು ಅವರು ಸಿದ್ಧರಿಲ್ಲ. ಆದರೆ ಅದೇ ಬಹುದೇವಾರಾಧಕರು ದೇವದೂತರುಗಳನ್ನು ಅಲ್ಲಾಹನ ಹೆಣ್ಣು ಮಕ್ಕಳೆಂದು ಆರೋಪಿಸುತ್ತಾರೆ. ಆಗ ಅವರಿಗೆ ಅದು ಕಳಂಕವೆಂದು ತೋರುವುದಿಲ್ಲ.
តាហ្វសៀរជាភាសា​អារ៉ាប់ជាច្រេីន:
لِلَّذِیْنَ لَا یُؤْمِنُوْنَ بِالْاٰخِرَةِ مَثَلُ السَّوْءِ ۚ— وَلِلّٰهِ الْمَثَلُ الْاَعْلٰی ؕ— وَهُوَ الْعَزِیْزُ الْحَكِیْمُ ۟۠
ಪರಲೋಕದಲ್ಲಿ ವಿಶ್ವಾಸವಿಡದವರಿಗೆ ಕೆಟ್ಟ ವಿಶೇಷಣವಿದೆ. ಅಲ್ಲಾಹನಿಗೆ ಅತ್ಯುನ್ನತ ವಿಶೇಷಣವಿದೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
وَلَوْ یُؤَاخِذُ اللّٰهُ النَّاسَ بِظُلْمِهِمْ مَّا تَرَكَ عَلَیْهَا مِنْ دَآبَّةٍ وَّلٰكِنْ یُّؤَخِّرُهُمْ اِلٰۤی اَجَلٍ مُّسَمًّی ۚ— فَاِذَا جَآءَ اَجَلُهُمْ لَا یَسْتَاْخِرُوْنَ سَاعَةً وَّلَا یَسْتَقْدِمُوْنَ ۟
ಅಲ್ಲಾಹು ಮನುಷ್ಯರನ್ನು ಅವರು ಮಾಡಿದ ಅಕ್ರಮಗಳ ಕಾರಣದಿಂದ ಹಿಡಿದು ಶಿಕ್ಷಿಸುವುದಾದರೆ, ಭೂಮಿಯಲ್ಲಿ ಒಂದೇ ಒಂದು ಜೀವಿಯೂ ಉಳಿಯುತ್ತಿರಲಿಲ್ಲ. ಆದರೆ ಅವನು ಒಂದು ನಿಗದಿತ ಅವಧಿಯವರೆಗೆ ಅವರಿಗೆ ಕಾಲಾವಕಾಶ ನೀಡುತ್ತಾನೆ. ಅವರ ಅವಧಿಯೇನಾದರೂ ಬಂದುಬಿಟ್ಟರೆ ಆ ಅವಧಿಯಿಂದ ಒಂದು ಕ್ಷಣ ಹಿಂದೆ ಉಳಿಯಲು ಅಥವಾ ಒಂದು ಕ್ಷಣ ಮುಂದಕ್ಕೆ ಹೋಗಲು ಅವರಿಗೆ ಸಾಧ್ಯವಿಲ್ಲ.
តាហ្វសៀរជាភាសា​អារ៉ាប់ជាច្រេីន:
وَیَجْعَلُوْنَ لِلّٰهِ مَا یَكْرَهُوْنَ وَتَصِفُ اَلْسِنَتُهُمُ الْكَذِبَ اَنَّ لَهُمُ الْحُسْنٰی ؕ— لَا جَرَمَ اَنَّ لَهُمُ النَّارَ وَاَنَّهُمْ مُّفْرَطُوْنَ ۟
ಅವರಿಗೆ ಇಷ್ಟವಿಲ್ಲದ ವಸ್ತುಗಳನ್ನು ಅವರು ಅಲ್ಲಾಹನಿಗೆ ಅರೋಪಿಸುತ್ತಾರೆ. ಅತ್ಯುತ್ತಮವಾದುದೆಲ್ಲವೂ ಅವರಿಗೆಂದು ಅವರ ನಾಲಗೆಗಳು ಸುಳ್ಳು ಸುಳ್ಳಾಗಿ ಬಣ್ಣಿಸುತ್ತವೆ. ಸಂಶಯವೇ ಇಲ್ಲ! ನಿಶ್ಚಯವಾಗಿಯೂ ನರಕಾಗ್ನಿಯಿರುವುದು ಅವರಿಗೇ ಆಗಿದೆ. ಅವರು (ನರಕವಾಸಿಗಳ) ಮುಂಭಾಗದಲ್ಲಿರುವರು.
តាហ្វសៀរជាភាសា​អារ៉ាប់ជាច្រេីន:
تَاللّٰهِ لَقَدْ اَرْسَلْنَاۤ اِلٰۤی اُمَمٍ مِّنْ قَبْلِكَ فَزَیَّنَ لَهُمُ الشَّیْطٰنُ اَعْمَالَهُمْ فَهُوَ وَلِیُّهُمُ الْیَوْمَ وَلَهُمْ عَذَابٌ اَلِیْمٌ ۟
ಅಲ್ಲಾಹನಾಣೆ! ನಿಮಗಿಂತ ಮೊದಲು ನಾವು ಅನೇಕ ಸಮುದಾಯಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಆದರೆ ಶೈತಾನನು ಅವರಿಗೆ ಅವರ ದುಷ್ಕರ್ಮಗಳನ್ನು ಅಂದಗೊಳಿಸಿ ತೋರಿಸಿದನು. ಇಂದು ಕೂಡ ಅವನು ಅವರ ಮಿತ್ರನೇ ಆಗಿದ್ದಾನೆ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
តាហ្វសៀរជាភាសា​អារ៉ាប់ជាច្រេីន:
وَمَاۤ اَنْزَلْنَا عَلَیْكَ الْكِتٰبَ اِلَّا لِتُبَیِّنَ لَهُمُ الَّذِی اخْتَلَفُوْا فِیْهِ ۙ— وَهُدًی وَّرَحْمَةً لِّقَوْمٍ یُّؤْمِنُوْنَ ۟
(ಪ್ರವಾದಿಯವರೇ) ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಅದನ್ನು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡಲು ನಾವು ನಿಮಗೆ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ. ಇದು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់ណះល៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ