Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាន់ណះល៍   អាយ៉ាត់:
وَاللّٰهُ اَنْزَلَ مِنَ السَّمَآءِ مَآءً فَاَحْیَا بِهِ الْاَرْضَ بَعْدَ مَوْتِهَا ؕ— اِنَّ فِیْ ذٰلِكَ لَاٰیَةً لِّقَوْمٍ یَّسْمَعُوْنَ ۟۠
ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಅದರಿಂದ ನಿರ್ಜೀವವಾಗಿದ್ದ ಭೂಮಿಗೆ ಜೀವವನ್ನು ನೀಡಿದನು. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
តាហ្វសៀរជាភាសា​អារ៉ាប់ជាច្រេីន:
وَاِنَّ لَكُمْ فِی الْاَنْعَامِ لَعِبْرَةً ؕ— نُسْقِیْكُمْ مِّمَّا فِیْ بُطُوْنِهٖ مِنْ بَیْنِ فَرْثٍ وَّدَمٍ لَّبَنًا خَالِصًا سَآىِٕغًا لِّلشّٰرِبِیْنَ ۟
ನಿಶ್ಚಯವಾಗಿಯೂ ನಿಮಗೆ ಜಾನುವಾರುಗಳಲ್ಲಿ ನೀತಿಪಾಠವಿದೆ. ಅವುಗಳ ಉದರಗಳಲ್ಲಿ ಏನಿದೆಯೋ ಅದರಿಂದ—ಸೆಗಣಿ ಮತ್ತು ರಕ್ತದ ನಡುವಿನಿಂದ—ನಾವು ನಿಮಗೆ ಶುದ್ಧ ಹಾಲನ್ನು ಕುಡಿಯಲು ನೀಡುತ್ತೇವೆ. ಅದು ಕುಡಿಯುವವರಿಗಂತೂ ಬಹಳ ರುಚಿಕರವಾಗಿದೆ.
តាហ្វសៀរជាភាសា​អារ៉ាប់ជាច្រេីន:
وَمِنْ ثَمَرٰتِ النَّخِیْلِ وَالْاَعْنَابِ تَتَّخِذُوْنَ مِنْهُ سَكَرًا وَّرِزْقًا حَسَنًا ؕ— اِنَّ فِیْ ذٰلِكَ لَاٰیَةً لِّقَوْمٍ یَّعْقِلُوْنَ ۟
ಖರ್ಜೂರದ ಮರಗಳ ಮತ್ತು ದ್ರಾಕ್ಷಿ ಬಳ್ಳಿಗಳ ಹಣ್ಣುಗಳಿಂದಲೂ ನೀವು ಶರಾಬನ್ನು ಮತ್ತು ಉತ್ತಮ ಆಹಾರಗಳನ್ನು ತಯಾರಿಸುತ್ತೀರಿ.[1] ನಿಶ್ಚಯವಾಗಿಯೂ ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
[1] ಈ ವಚನವು ಅವತೀರ್ಣವಾಗುವಾಗ ಶರಾಬನ್ನು ನಿಷೇಧಿಸಲಾಗಿರಲಿಲ್ಲ. ಆದರೂ ಈ ವಚನದಲ್ಲಿ ಶರಾಬು ಎಂದು ಹೇಳಿದ ಬಳಿಕ ಉತ್ತಮ ಆಹಾರ ಎಂಬ ಉಲ್ಲೇಖವಿದೆ. ಶರಾಬು ಉತ್ತಮ ಆಹಾರವಲ್ಲ ಎಂದು ಇದರಿಂದ ತಿಳಿಯಬಹುದು.
តាហ្វសៀរជាភាសា​អារ៉ាប់ជាច្រេីន:
وَاَوْحٰی رَبُّكَ اِلَی النَّحْلِ اَنِ اتَّخِذِیْ مِنَ الْجِبَالِ بُیُوْتًا وَّمِنَ الشَّجَرِ وَمِمَّا یَعْرِشُوْنَ ۟ۙ
ನಿಮ್ಮ ಪರಿಪಾಲಕನು (ಅಲ್ಲಾಹು) ಜೇನುನೊಣಕ್ಕೆ ಸಂದೇಶವನ್ನು ನೀಡಿದನು: “ಬೆಟ್ಟಗಳಲ್ಲಿ, ಮರಗಳಲ್ಲಿ ಮತ್ತು ಮನುಷ್ಯರು ನಿರ್ಮಿಸಿದ ಎತ್ತರದ ಕಟ್ಟಡಗಳಲ್ಲಿ ಗೂಡುಗಳನ್ನು ನಿರ್ಮಿಸು.
តាហ្វសៀរជាភាសា​អារ៉ាប់ជាច្រេីន:
ثُمَّ كُلِیْ مِنْ كُلِّ الثَّمَرٰتِ فَاسْلُكِیْ سُبُلَ رَبِّكِ ذُلُلًا ؕ— یَخْرُجُ مِنْ بُطُوْنِهَا شَرَابٌ مُّخْتَلِفٌ اَلْوَانُهٗ فِیْهِ شِفَآءٌ لِّلنَّاسِ ؕ— اِنَّ فِیْ ذٰلِكَ لَاٰیَةً لِّقَوْمٍ یَّتَفَكَّرُوْنَ ۟
ನಂತರ ಎಲ್ಲ ರೀತಿಯ ಹಣ್ಣುಗಳನ್ನು ತಿಂದು, ನಿನ್ನ ಪರಿಪಾಲಕನು (ಅಲ್ಲಾಹು) ಸುಲಭಗೊಳಿಸಿದ ಮಾರ್ಗಗಳಲ್ಲಿ ಸಂಚರಿಸು.” ಅವುಗಳ ಉದರಗಳಿಂದ ವಿಭಿನ್ನ ರಂಗುಗಳ ಪಾನೀಯವು ಹೊರಬರುತ್ತದೆ. ಅದರಲ್ಲಿ ಮನುಷ್ಯರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಯೋಚಿಸುವ ಜನರಿಗೆ ಅದರಲ್ಲಿ ದೃಷ್ಟಾಂತವಿದೆ.
តាហ្វសៀរជាភាសា​អារ៉ាប់ជាច្រេីន:
وَاللّٰهُ خَلَقَكُمْ ثُمَّ یَتَوَفّٰىكُمْ وَمِنْكُمْ مَّنْ یُّرَدُّ اِلٰۤی اَرْذَلِ الْعُمُرِ لِكَیْ لَا یَعْلَمَ بَعْدَ عِلْمٍ شَیْـًٔا ؕ— اِنَّ اللّٰهَ عَلِیْمٌ قَدِیْرٌ ۟۠
ಅಲ್ಲಾಹು ನಿಮ್ಮನ್ನು ಸೃಷ್ಟಿಸಿದನು. ನಂತರ ನಿಮ್ಮನ್ನು ಅವನು ಮೃತಪಡಿಸುವನು. ನಿಮ್ಮಲ್ಲಿ ಕೆಲವರನ್ನು—ಅವರು ಅನೇಕ ವಿಷಯಗಳನ್ನು ತಿಳಿದುಕೊಂಡ ಬಳಿಕವೂ ಏನೂ ತಿಳಿಯದ ಅವಸ್ಥೆಗೆ ತಲುಪುವ ರೀತಿಯಲ್ಲಿ ಹಣ್ಣು ಹಣ್ಣು ಮುದುಕರಾಗುವ ಪ್ರಾಯಕ್ಕೆ ಮರಳಿಸಲಾಗುವರು. ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ.
តាហ្វសៀរជាភាសា​អារ៉ាប់ជាច្រេីន:
وَاللّٰهُ فَضَّلَ بَعْضَكُمْ عَلٰی بَعْضٍ فِی الرِّزْقِ ۚ— فَمَا الَّذِیْنَ فُضِّلُوْا بِرَآدِّیْ رِزْقِهِمْ عَلٰی مَا مَلَكَتْ اَیْمَانُهُمْ فَهُمْ فِیْهِ سَوَآءٌ ؕ— اَفَبِنِعْمَةِ اللّٰهِ یَجْحَدُوْنَ ۟
ಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತಲೂ ಹೆಚ್ಚು ಉಪಜೀವನವನ್ನು ನೀಡಿದ್ದಾನೆ. ಹೆಚ್ಚು ಉಪಜೀವನ ನೀಡಲಾದವರು ಅದನ್ನು ತಮ್ಮ ಅಧೀನದಲ್ಲಿರುವ ಗುಲಾಮರಿಗೆ ನೀಡಿ ಅದರಲ್ಲಿ ಇಬ್ಬರೂ (ಗುಲಾಮ ಮತ್ತು ಯಜಮಾನ) ಸಮಾನರಾಗುವಂತೆ ಮಾಡಿಕೊಳ್ಳುವುದಿಲ್ಲ.[1] ಹಾಗಿದ್ದೂ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸುತ್ತಾರೆಯೇ?
[1] ನಿಮ್ಮ ಅಧೀನದಲ್ಲಿರುವ ಗುಲಾಮರಿಗಿಂತಲೂ ಹೆಚ್ಚು ಆಸ್ತಿಪಾಸ್ತಿ ನಿಮ್ಮಲ್ಲಿದೆ. ಆದರೂ ನೀವು ನಿಮ್ಮಲ್ಲಿರುವ ಆಸ್ತಿಯನ್ನು ಅವರಿಗೂ ಹಂಚಿ ನೀವಿಬ್ಬರೂ ಆಸ್ತಿಯಲ್ಲಿ ಸಮಾನರಾಗುವಂತೆ ಮಾಡುವುದಿಲ್ಲ. ಆದರೆ ನೀವು ಅಲ್ಲಾಹನ ದಾಸರನ್ನು ಅವನಿಗೆ ಸಹಭಾಗಿಯಾಗಿ ಮಾಡಿ ಅವರು ಅಲ್ಲಾಹನಿಗೆ ಸಮಾನರಾಗಿದ್ದಾರೆ ಮತ್ತು ಅಲ್ಲಾಹು ಅವರಿಗೆ ಅವನ ಅಧಿಕಾರವನ್ನು ಹಂಚಿದ್ದಾನೆಂದು ಹೇಳುತ್ತೀರಿ.
តាហ្វសៀរជាភាសា​អារ៉ាប់ជាច្រេីន:
وَاللّٰهُ جَعَلَ لَكُمْ مِّنْ اَنْفُسِكُمْ اَزْوَاجًا وَّجَعَلَ لَكُمْ مِّنْ اَزْوَاجِكُمْ بَنِیْنَ وَحَفَدَةً وَّرَزَقَكُمْ مِّنَ الطَّیِّبٰتِ ؕ— اَفَبِالْبَاطِلِ یُؤْمِنُوْنَ وَبِنِعْمَتِ اللّٰهِ هُمْ یَكْفُرُوْنَ ۟ۙ
ಅಲ್ಲಾಹು ನಿಮ್ಮಿಂದಲೇ ನಿಮಗೆ ಪತ್ನಿಯರನ್ನು ಮಾಡಿಕೊಟ್ಟನು. ನಿಮ್ಮ ಪತ್ನಿಯರ ಮೂಲಕ ನಿಮಗೆ ಮಕ್ಕಳು ಮೊಮ್ಮಕ್ಕಳನ್ನು ಮಾಡಿಕೊಟ್ಟನು. ಉತ್ತಮ ವಸ್ತುಗಳನ್ನು ನಿಮಗೆ ಆಹಾರವಾಗಿ ನೀಡಿದನು. ಹೀಗಿದ್ದೂ ಅವರು ಅಸತ್ಯದಲ್ಲಿ ನಂಬಿಕೆಯಿಟ್ಟು ಅಲ್ಲಾಹನ ಸವಲತ್ತುಗಳನ್ನು ನಿಷೇಧಿಸುತ್ತಾರೆಯೇ?
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់ណះល៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ