Check out the new design

ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ * - សន្ទស្សន៍នៃការបកប្រែ

PDF XML CSV Excel API
Please review the Terms and Policies

ការបកប្រែអត្ថន័យ ជំពូក​: អាន់ណះល៍   អាយ៉ាត់:
ثُمَّ اِنَّ رَبَّكَ لِلَّذِیْنَ عَمِلُوا السُّوْٓءَ بِجَهَالَةٍ ثُمَّ تَابُوْا مِنْ بَعْدِ ذٰلِكَ وَاَصْلَحُوْۤا اِنَّ رَبَّكَ مِنْ بَعْدِهَا لَغَفُوْرٌ رَّحِیْمٌ ۟۠
ಯಾರು ಅಜ್ಞಾನದಿಂದ ಪಾಪ ಮಾಡಿ ನಂತರ ಪಶ್ಚಾತ್ತಾಪಪಟ್ಟು ಸ್ವಯಂ ಸುಧಾರಿಸಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ಅದರ ಬಳಿಕವೂ ಅವರನ್ನು ಕ್ಷಮಿಸುವನು ಮತ್ತು ಅವರಿಗೆ ದಯೆ ತೋರುವನು.
តាហ្វសៀរជាភាសា​អារ៉ាប់ជាច្រេីន:
اِنَّ اِبْرٰهِیْمَ كَانَ اُمَّةً قَانِتًا لِّلّٰهِ حَنِیْفًا ؕ— وَلَمْ یَكُ مِنَ الْمُشْرِكِیْنَ ۟ۙ
ನಿಶ್ಚಯವಾಗಿಯೂ ಇಬ್ರಾಹೀಮರು ಒಬ್ಬ ಮುಖಂಡರಾಗಿದ್ದರು. ಅವರು ಅಲ್ಲಾಹನಿಗೆ ವಿಧೇಯತೆ ತೋರುವವರು ಮತ್ತು ಏಕನಿಷ್ಠರಾಗಿದ್ದರು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ.
តាហ្វសៀរជាភាសា​អារ៉ាប់ជាច្រេីន:
شَاكِرًا لِّاَنْعُمِهٖ ؕ— اِجْتَبٰىهُ وَهَدٰىهُ اِلٰی صِرَاطٍ مُّسْتَقِیْمٍ ۟
ಅವರು ಅಲ್ಲಾಹನ ಅನುಗ್ರಹಗಳಿಗೆ ಆಭಾರಿಯಾಗಿದ್ದರು. ಅಲ್ಲಾಹು ಅವರನ್ನು ಆರಿಸಿದ್ದನು ಮತ್ತು ನೇರಮಾರ್ಗಕ್ಕೆ ಸೇರಿಸಿದ್ದನು.
តាហ្វសៀរជាភាសា​អារ៉ាប់ជាច្រេីន:
وَاٰتَیْنٰهُ فِی الدُّنْیَا حَسَنَةً ؕ— وَاِنَّهٗ فِی الْاٰخِرَةِ لَمِنَ الصّٰلِحِیْنَ ۟ؕ
ನಾವು ಅವರಿಗೆ ಇಹಲೋಕದಲ್ಲೇ ಒಳಿತನ್ನು ದಯಪಾಲಿಸಿದ್ದೇವೆ. ಪರಲೋಕದಲ್ಲಿ ಅವರು ನಿಶ್ಚಯವಾಗಿಯೂ ನೀತಿವಂತರಲ್ಲಿ ಸೇರುವರು.
តាហ្វសៀរជាភាសា​អារ៉ាប់ជាច្រេីន:
ثُمَّ اَوْحَیْنَاۤ اِلَیْكَ اَنِ اتَّبِعْ مِلَّةَ اِبْرٰهِیْمَ حَنِیْفًا ؕ— وَمَا كَانَ مِنَ الْمُشْرِكِیْنَ ۟
ನಂತರ, ನಾವು ನಿಮಗೆ, “ಏಕನಿಷ್ಠರಾದ ಇಬ್ರಾಹೀಮರ ಧರ್ಮವನ್ನು ಹಿಂಬಾಲಿಸಿರಿ” ಎಂದು ದೇವವಾಣಿಯನ್ನು ನೀಡಿದೆವು. ಅವರು ಬಹುದೇವವಿಶ್ವಾಸಿಗಳಲ್ಲಿ ಸೇರಿದವರಾಗಿರಲಿಲ್ಲ.
តាហ្វសៀរជាភាសា​អារ៉ាប់ជាច្រេីន:
اِنَّمَا جُعِلَ السَّبْتُ عَلَی الَّذِیْنَ اخْتَلَفُوْا فِیْهِ ؕ— وَاِنَّ رَبَّكَ لَیَحْكُمُ بَیْنَهُمْ یَوْمَ الْقِیٰمَةِ فِیْمَا كَانُوْا فِیْهِ یَخْتَلِفُوْنَ ۟
ಸಬ್ಬತ್‌ನ ವಿಷಯದಲ್ಲಿ ಭಿನ್ನಮತ ತಳೆದವರ ಮೇಲೆಯೇ ಅದನ್ನು ಗೌರವಿಸಬೇಕೆಂದು ನಾವು ವಿಧಿಸಿದೆವು. ಅವರು ಯಾವ ವಿಷಯದಲ್ಲಿ ಭಿನ್ನಮತ ತಳೆದರೋ ಆ ವಿಷಯದಲ್ಲಿ ನಿಮ್ಮ ಪರಿಪಾಲಕನು (ಅಲ್ಲಾಹು) ಪುನರುತ್ಥಾನ ದಿನದಂದು ಅವರ ಮಧ್ಯೆ ಖಂಡಿತ ತೀರ್ಪು ನೀಡುವನು.
តាហ្វសៀរជាភាសា​អារ៉ាប់ជាច្រេីន:
اُدْعُ اِلٰی سَبِیْلِ رَبِّكَ بِالْحِكْمَةِ وَالْمَوْعِظَةِ الْحَسَنَةِ وَجَادِلْهُمْ بِالَّتِیْ هِیَ اَحْسَنُ ؕ— اِنَّ رَبَّكَ هُوَ اَعْلَمُ بِمَنْ ضَلَّ عَنْ سَبِیْلِهٖ وَهُوَ اَعْلَمُ بِالْمُهْتَدِیْنَ ۟
ವಿವೇಚನೆ ಮತ್ತು ಅತ್ಯುತ್ತಮ ಉಪದೇಶದ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಮಾರ್ಗಕ್ಕೆ ಜನರನ್ನು ಕರೆಯಿರಿ. ಅವರೊಡನೆ ಅತ್ಯುತ್ತಮ ರೀತಿಯಲ್ಲಿ ತರ್ಕಿಸಿರಿ. ತನ್ನ ಮಾರ್ಗದಿಂದ ತಪ್ಪಿಹೋದವರು ಯಾರೆಂದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂದೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ.
តាហ្វសៀរជាភាសា​អារ៉ាប់ជាច្រេីន:
وَاِنْ عَاقَبْتُمْ فَعَاقِبُوْا بِمِثْلِ مَا عُوْقِبْتُمْ بِهٖ ؕ— وَلَىِٕنْ صَبَرْتُمْ لَهُوَ خَیْرٌ لِّلصّٰبِرِیْنَ ۟
ನೀವು ಪ್ರತೀಕಾರ ಪಡೆಯುವುದಾದರೆ ನಿಮ್ಮ ವಿರುದ್ಧ (ವೈರಿಗಳಿಂದ) ಎಷ್ಟು ಅತಿರೇಕ ನಡೆದಿದೆಯೋ ಅಷ್ಟೇ ಪ್ರತೀಕಾರ ಪಡೆಯಿರಿ. ನೀವು ತಾಳ್ಮೆ ತೋರುವುದಾದರೆ, ತಾಳ್ಮೆಯುಳ್ಳವರಿಗೆ ಖಂಡಿತವಾಗಿಯೂ ಅದೇ ಅತ್ಯುತ್ತಮವಾಗಿದೆ.
តាហ្វសៀរជាភាសា​អារ៉ាប់ជាច្រេីន:
وَاصْبِرْ وَمَا صَبْرُكَ اِلَّا بِاللّٰهِ وَلَا تَحْزَنْ عَلَیْهِمْ وَلَا تَكُ فِیْ ضَیْقٍ مِّمَّا یَمْكُرُوْنَ ۟
(ಪ್ರವಾದಿಯವರೇ) ತಾಳ್ಮೆ ತೋರಿರಿ. ಅಲ್ಲಾಹನ ಕೃಪೆಯಿಂದಲೇ ನೀವು ತಾಳ್ಮೆ ತೋರುತ್ತೀರಿ. ಅವರ ಬಗ್ಗೆ ನೊಂದುಕೊಳ್ಳಬೇಡಿ. ಅವರು ಮಾಡುವ ಪಿತೂರಿಗಳನ್ನು ನೋಡಿ ಸಂಕಟಪಡಬೇಡಿ.
តាហ្វសៀរជាភាសា​អារ៉ាប់ជាច្រេីន:
اِنَّ اللّٰهَ مَعَ الَّذِیْنَ اتَّقَوْا وَّالَّذِیْنَ هُمْ مُّحْسِنُوْنَ ۟۠
ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಮತ್ತು ನೀತಿವಂತರೊಡನೆ ಇದ್ದಾನೆ.
តាហ្វសៀរជាភាសា​អារ៉ាប់ជាច្រេីន:
 
ការបកប្រែអត្ថន័យ ជំពូក​: អាន់ណះល៍
សន្ទស្សន៍នៃជំពូក លេខ​ទំព័រ
 
ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ - សន្ទស្សន៍នៃការបកប្រែ

បានបកប្រែដោយ​មុហាម៉ាត់ ហាំហ្សា បេតួរ។ បានអភិវឌ្ឍដោយការត្រួតពិនិត្យរបស់មជ្ឈមណ្ឌលបកប្រែរ៉ូវ៉ាទ។

បិទ